-->
ದಕ್ಷ ಪೊಲೀಸ್ ಅಧಿಕಾರಿ ಸಿ. ಎ. ತಿಮ್ಮಯ್ಯ ನಿಧನ

ದಕ್ಷ ಪೊಲೀಸ್ ಅಧಿಕಾರಿ ಸಿ. ಎ. ತಿಮ್ಮಯ್ಯ ನಿಧನ



ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ ಸಿ. ಎ. ತಿಮ್ಮಯ್ಯ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. 

ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ತಿಮ್ಮಯ್ಯ ಅವರು ಕೆಲ ಸಮಯದಿಂದ ಶ್ವಾಸಕೋಶದ ಅಸೌಖ್ಯದಿಂದ ಬಳಲುತ್ತಿದ್ದರು. ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಿದೆ ನಿಧನರಾಗಿದ್ದಾರೆ. 

ಸಿ. ಎ. ತಿಮ್ಮಯ್ಯ ಅವರು ಈ ಹಿಂದೆ ಉಡುಪಿ ನಗರ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕೊಡಗು ಜಿಲ್ಲೆಯ ಬಲಮುರಿ ಗ್ರಾಮದವರಾದ ತಿಮ್ಮಯ್ಯ ಅವರು ಪೊಲೀಸ್ ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಅವರ ನಿಧನಕ್ಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಅಪಾರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 

ಇಂದು ಮಧ್ಯಾಹ್ನ 3 ಗಂಟೆಯವರೆಗೆ ಮಂಡ್ಯದ ನೀರಾವರಿ ಇಲಾಖೆ ಕ್ವಾಟ್ರಸ್, ಅಶೋಕನಗರ, ವಿ.ವಿ. ರಸ್ತೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

Ads on article

Advertise in articles 1

advertising articles 2

Advertise under the article