-->
ಎಂಎಲ್‌ಸಿ ಪಿ.ವಿ. ಮೋಹನ್ ವಶಕ್ಕೆ ಪಡೆದ ಆಂದ್ರ ಪೊಲೀಸರು

ಎಂಎಲ್‌ಸಿ ಪಿ.ವಿ. ಮೋಹನ್ ವಶಕ್ಕೆ ಪಡೆದ ಆಂದ್ರ ಪೊಲೀಸರು


ಮತಗಳ್ಳತನದ ವಿರುದ್ಧ ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿಜಯವಾಡದ ಲೆನಿನ್ ಸರ್ಕಲ್‌ಗೆ ತೆರಳುತ್ತಿದ್ದ ಮಂಗಳೂರು ಮೂಲದ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅವರನ್ನು ಶನಿವಾರ ಆಂಧ್ರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮೋಹನ್, ಪೊಲೀಸರು ತಮ್ಮ ವಾಹನವನ್ನು ತಡೆದು ಸುತ್ತುವರಿದ ಬಳಿಕ ವಾಹನದ ನಿಯಂತ್ರಣ ಪಡೆದು ಭವಾನಿಪುರಂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಹಲವು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರೂ, ತಮ್ಮನ್ನು ಬಲವಂತವಾಗಿ ಠಾಣೆಗೆ ಕರೆದೊಯ್ಯಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಬಳಸಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.

ತಮ್ಮನ್ನು ವಶಕ್ಕೆ ಪಡೆಯಲು ಮತ್ತು ಠಾಣೆಗೆ ಕರೆದೊಯ್ಯಲು ಪೊಲೀಸರು ಯಾವ ಕಾನೂನುಬದ್ಧ ಅಧಿಕಾರ ಹೊಂದಿದ್ದರು ಎಂದು ಮೋಹನ್ ಪ್ರಶ್ನಿಸಿದ್ದಾರೆ. 

ಈ ಕ್ರಮವು ಪ್ರಜಾಸತ್ತಾತ್ಮಕ ಪ್ರತಿಭಟನೆ, ಹೊಣೆಗಾರಿಕೆ ಮತ್ತು ಕಾನೂನಿನ ಆಳ್ವಿಕೆಗೆ ಮಾಡಿದ ಧಕ್ಕೆ ಎಂದು ಅವರು ಟೀಕಿಸಿದ್ದಾರೆ.

ಇದೇ ವೇಳೆ, ಆಂಧ್ರ ಪ್ರದೇಶದ ಹಿತಾಸಕ್ತಿ ಮತ್ತು ಸ್ವಾಭಿಮಾನವನ್ನು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಹಿತಾಸಕ್ತಿಗಳಿಗೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಬಲಿಕೊಡುತ್ತಿದ್ದಾರೆಯೇ ಎಂದೂ ಮೋಹನ್ ಪ್ರಶ್ನಿಸಿದ್ದಾರೆ. .

Ads on article

Advertise in articles 1

advertising articles 2

Advertise under the article