ಬೈಕ್ ಅಪಘಾತ: ಸವಾರ ಸಾವು
Saturday, October 10, 2026
ಬೈಕೊಂದು ಹೆದ್ದಾರಿಯ ತಡೆಬೇಲಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ವೃತ್ತಿಯಲ್ಲಿ ಮೀನುಗಾರರಾಗಿರುವ, ಭಟ್ಕಳ ತಾಲೂಕಿನ ಬೆಳ್ಳಿ ನಿವಾಸಿ ಉಮೇಶ ಮಂಜುನಾಥ ಮೊಗೇರ (43) ಎಂದು ಗುರುತಿಸಲಾಗಿದೆ.ಅವರು ಶನಿವಾರ ಅಪರಾಹ್ನ ಕುಂದಾಪುರದ ಆಸ್ಪತ್ರೆಯಲ್ಲಿ ಪತ್ನಿಯ ಆರೋಗ್ಯ ವಿಚಾರಿಸಿ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೈಕಿನಲ್ಲಿದ್ದ ಸಹ ಸವಾರರಾದ ಪದ್ಮಾ ಮೊಗೇರ ಅವರರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.