-->
 ಉಡುಪಿಯಲ್ಲಿ ರಾಜ್ಯಮಟ್ಟದ ‘ವಾಯ್ಸ್ ಆಫ್ ಉಡುಪಿ’ ಕರೋಕೆ ಗಾಯನ ಸ್ಪರ್ಧೆ

ಉಡುಪಿಯಲ್ಲಿ ರಾಜ್ಯಮಟ್ಟದ ‘ವಾಯ್ಸ್ ಆಫ್ ಉಡುಪಿ’ ಕರೋಕೆ ಗಾಯನ ಸ್ಪರ್ಧೆ


ಶ್ರೀ ಮೂಕಾಂಬಿಕ ಕಲಾ ತಂಡ,  ಪೊಲೀಸ್ ಲೈನ್ ಉಡುಪಿ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ನಿಯಮಿತ, ಪೆರ್ಡೂರು ಇವರ ಸಹಭಾಗಿತ್ವದಲ್ಲಿ, ತುಷಾರ ಶಂಕರ ಅವರ ಸಾರಥ್ಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಮೊದಲ ಬಾರಿಗೆ ರಾಜ್ಯಮಟ್ಟದ ‘ವಾಯ್ಸ್ ಆಫ್ ಉಡುಪಿ’ (ಸೀಸನ್-1) ಕರೋಕೆ ಗೀತಗಾಯನ ಸ್ಪರ್ಧೆಯನ್ನು ಆಯೋಜಿಸಲಾಯಿತು.


ಉಡುಪಿಯ ಮಿಷನ್ ಕಂಪೌಂಡ್ ಸಮೀಪದ ಕ್ರಿಶ್ಚಿಯನ್ ಇಂಗ್ಲಿಷ್ ಮೀಡಿಯಂ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಹಾಗೂ ಹರೀಶ್ ಕೊಡಂಚ ಉದ್ಘಾಟಿಸಿದರು.


ಸ್ಪರ್ಧೆಯಲ್ಲಿ ಕುಂದಾಪುರ, ಕಾಪು, ಉಡುಪಿ ಸೇರಿದಂತೆ ವಿವಿಧ ಭಾಗಗಳಿಂದ 35ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಯ ಅಂತಿಮ ಸುತ್ತಿಗೆ 16 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. 

ತೀರ್ಪುಗಾರರಾಗಿ ಪ್ರಕಾಶ್ ಕಾಳಾವರ, ಡಾ. ಸಚಿನ್ ಸಾಲ್ಯಾನ್, ಚೈತನ್ಯ ಎನ್. ಶಿವಪುರ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವಿದುಷಿ ಮಂಜರಿ ಚಂದ್ರ, ಬಡಗುಬೆಟ್ಟು ಸೊಸೈಟಿಯ  ಪ್ರವೀಣ್ ಕುಮಾರ್ ಹಾಗೂ ಶಾಂತ ಉಪಸ್ಥಿತರಿದ್ದರು. 

ಕೃತಿ ಮೂಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಲೇನ್ ನ ವಿಜಯ, ವಸಂತಿ, ಅಮೃತ, ಆಶಾ ಸೇರಿದಂತೆ ಸದಸ್ಯೆಯರು ಸಹಕರಿಸಿದರು. ಅ.14ರಂದು ಸಂಜೆ 4 ಗಂಟೆಗೆ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ಅಂತಿಮ ಸುತ್ತಿನ ಗಾಯನ ಸ್ಪರ್ಧೆ ನಡೆಯಲಿದೆ. 

Ads on article

Advertise in articles 1

advertising articles 2

Advertise under the article