-->
 2018ರ ಪ್ರಕರಣ: ನಕ್ಸಲ್ ಮುಂಡಗಾರು ಲತಾ ಪೊಲೀಸ್ ವಶ

2018ರ ಪ್ರಕರಣ: ನಕ್ಸಲ್ ಮುಂಡಗಾರು ಲತಾ ಪೊಲೀಸ್ ವಶ


ನಕ್ಸಲ್ ಚಟುವಟಿಕೆಗಳ ಆರೋಪ ಎದುರಿಸುತ್ತಿರುವ ಮುಂಡಗಾರು ಲತಾ ಅವರನ್ನು 2018ರ ಹಳೆಯ ಪ್ರಕರಣವೊಂದರ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2018ರಲ್ಲಿ ಅಡ್ಡಹೊಳೆ ಎಂಬಲ್ಲಿ ಪಡಿತರ ಸಾಮಗ್ರಿಗಳನ್ನು ಪಡೆದುಕೊಂಡು ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕಡಬ ನ್ಯಾಯಾಲಯದ ಮೂಲಕ ಪೊಲೀಸರು ಮುಂಡಗಾರು ಲತಾ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗಾಗಿ ಅವರನ್ನು ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.

ಪ್ರಕರಣದ ವಿಚಾರಣೆಯನ್ನು ಬೆಳ್ತಂಗಡಿ ಪ್ರಭಾರ ಡಿವೈಎಸ್ಪಿ ಇ. ಮಂಜುನಾಥ್ ಅವರು ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article