-->
 ಸರಳೆಬೆಟ್ಟು ರಾಜಣ್ಣ ಇನ್ನಿಲ್ಲ

ಸರಳೆಬೆಟ್ಟು ರಾಜಣ್ಣ ಇನ್ನಿಲ್ಲ


ಉಡುಪಿ ಸರಳೆಬೆಟ್ಟು ನೆಹರು ನಗರದ ನಿವಾಸಿ ರಾಜಣ್ಣ (75) ಅವರು ನ. 7ರ ಶನಿವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು.

ಅವರು ಎಂದಿನಂತೆ ಮನೆಯ ಸಮೀಪದ ಕೆಲಸಕ್ಕೆ ತೆರಳಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಗೆ ಮರಳಿ ಆಸ್ಪತ್ರೆಗೆ ತೆರಳಲು ಸಿದ್ಧರಾಗುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ರಾಜಣ್ಣ ಅವರ ಕೋರಿಕೆಯ ಮೇರೆಗೆ ಅವರ ಮನೆಯ ಬಳಿಯ ರಸ್ತೆಗೆ 'ರಾಜ್‌ಕುಮಾರ್ ರಸ್ತೆ' ಎಂದು ನಾಮಕರಣ ಮಾಡಲಾಗಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಹಾಗೂ ನಗರಾಡಳಿತಕ್ಕೆ ಸಂಬಂಧಿಸಿದ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೃತರು ಕುಟುಂಬಸ್ಥರು, ಬಂಧುಗಳು ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ. ನ. 8ರಂದು ಸಂಜೆ 4 ಗಂಟೆಗೆ ಪರಂಪಳ್ಳಿ ಚರ್ಚ್‌ನಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ.

Ads on article

Advertise in articles 1

advertising articles 2

Advertise under the article