
Bangalore: ಚಿನ್ನ ಮತ್ತು ಬೆಳ್ಳಿ ದರಗಳಲ್ಲಿಇಳಿಕೆ
16/07/2025 06:39 AM
ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತಗಳು ಕಂಡುಬ0ದಿವೆ. ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 99,280 ರೂಪಾಯಿಗಳಿದ್ದು, ಬೆಳ್ಳಿ ದರದಲ್ಲಿ ತುಸು ಇಳಿಕೆ ಕಂಡುಬ0ದಿದೆ.
ಹತ್ತು ಸಾವಿರ ರೂ ಗಡಿ ಸಮೀಪ ಹೋಗಿದ್ದ ಅಪರಂಜಿ ಚಿನ್ನದ ಬೆಲೆ 9,928 ರೂಗೆ ಇಳಿದಿದೆ. ನಿನ್ನೆ ಭರ್ಜರಿ ಹೆಚ್ಚಳ ಕಂಡಿದ್ದ ಬೆಳ್ಳಿ ಬೆಲೆ ಇವತ್ತು ಮೊದಲಿನ ಸ್ಥಿತಿಗೆ ಮರಳಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 91,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 99,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 91,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,400 ರುಪಾಯಿಯಲ್ಲಿ ಇದೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,828 ರೂಪಾಯಿ
8 ಗ್ರಾಂ: 79,424 ರೂಪಾಯಿ
10 ಗ್ರಾಂ: 99,280 ರೂಪಾಯಿ
100 ಗ್ರಾಂ: 9,92,800 ರೂಪಾಯಿ