Bangalore: ಅಭಿನಯ ಸರಸ್ವತಿಯ ಅಂತಿಮ ದರ್ಶನ: ಸಿಎಂ ನಮನ

Bangalore: ಅಭಿನಯ ಸರಸ್ವತಿಯ ಅಂತಿಮ ದರ್ಶನ: ಸಿಎಂ ನಮನ


'ಅಭಿನಯ ಸರಸ್ವತಿ' ಎಂದೇ ಖ್ಯಾತರಾದ ಬಹುಭಾಷಾ ನಟಿ ಬಿ. ಸರೋಜಾ ದೇವಿ ಜುಲೈ 14ರಂದು ತಮ್ಮ 87ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ದು, ಜುಲೈ 15ರಂದು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ. 


ಸಿಎಂ ಸಿದ್ದರಾಮಯ್ಯ ಅವರು ನಟಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಟಿಯ ಬೆಂಗಳೂರು ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಸಿನಿಮಾ ಗಣ್ಯರು, ರಾಜಕೀಯ ಮುಖಂಡರು ಆಗಮಿಸಿ, ಅಂತಿಮ ನಮನ ಸಲ್ಲಿಸಿದರು. ಬೆಳಗ್ಗೆ 8 ಗಂಟೆಯಿ0ದಲೇ ಸರೋಜಾ ದೇವಿ ಅವರ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. 


Ads on article

Advertise in articles 1

advertising articles 2

Advertise under the article