
Bangalore:Instagramನಲ್ಲಿ ಒನ್ ಸೈಡ್ ಲವ್; ಮಹಿಳೆಯ ತಂದೆಗೆ ಚೂರಿ ಇರಿತ
21/07/2025 05:39 AM
ಸಾಮಾಜಿಕ ಜಾಲತಾಣ Instagramನಲ್ಲಿ ಪರಿಚಯವಾದ ಮಹಿಳೆಯೊಬ್ಬರನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಆಕೆಯ ತಂದೆಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ನಡೆದಿದೆ. ಆರೋಪಿ ಕೃಷ್ಣಗಿರಿಯ ಸೆಲ್ವ ಕಾರ್ತಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಹೊಸೂರಿನ ಖಾಸಗಿ ವಾಹನ ತಯಾರಿಕಾ ಕಂಪನಿಯಲ್ಲಿ ಮಾರಾಟ ಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು ಮತ್ತು ಕೆಲವು ತಿಂಗಳ ಹಿಂದೆ ಕಗ್ಗದಾಸಪುರದ ವಿವಾಹಿತ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದು, ಆನ್‌ಲೈನ್‌ನಲ್ಲಿ ಚಾಟ್ ಮಾಡುತ್ತಿದ್ದನು. ಮಹಿಳೆಯನ್ನು ಮದುವೆಯಾಗುವದಾಗಿ ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಮಹಿಳೆಯು ತಂದೆಯ ಬಳಿ ಹೇಳಿಕೊಂಡಿದ್ದರು. ಮಹಿಳೆಯ ತಂದೆ ಯುವಕನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಕುಸಿತನಾದ ಆರೋಪಿ ಸೆಲ್ವ ಕಾರ್ತಿಕ್ ,ಮಹಿಳೆಯ ತಂದೆ ಸತೀಶ್ ಅವರ ಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಸತೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದೆ.