Bangalore : ರಾಜ್ಯದಲ್ಲಿ ತೆಂಗಿನಕಾಯಿ ದುಬಾರಿ
Wednesday, July 02, 2025
ರಾಜ್ಯದಲ್ಲಿ ತೆಂಗಿನಕಾಯಿಯ ದರ ಗಣನೀಯವಾಗಿ ಏರಿಕೆಯಾಗಿದೆ. ಯಾವಾಗಲೂ ಒಂದು ಕೆ.ಜಿ. ತೆಂಗಿನಕಾಯಿಗೆ 30ರಿಂದ 40 ರೂ. ಇರುತ್ತಿತ್ತು. ಆದರೆ, ಇದೀಗ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತೆಂಗಿನಕಾಯಿ ಬೆಲೆ 70ರಿಂದ 80 ರೂ.ದಾಟಿದ್ದು, ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಇದು ಒಂದೆಡೆ ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದ್ರೆ, ಇನ್ನೊಂದೆಡೆ ಸಾಮಾನ್ಯ ಜನರಿಗೆ ಹೊರೆಯಾಗಿದೆ.
ತೆಂಗಿನಕಾಯಿ ಜೊತೆ ಕೊಬ್ಬರಿ, ಕೊಬ್ಬರಿ ಎಣ್ಣೆ, ಏಳನೀರು ದರದಲ್ಲೂ ಭಾರೀ ಏರಿಕೆಯಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಲೀಟರಿಗೆ 310 ರೂಪಾಯಿಯಾದ್ರೆ, ಏಳನೀರು ಒಂದಕ್ಕೆ 70 ರೂಪಾಯಿ ದಾಟಿದೆ. ಒಂದು ಕೆ.ಜಿ.ತೆಂಗಿನಕಾಯಿ ಬೆಲೆ 100 ರೂ.ಗಿಂತಲೂ ಅಧಿಕವಾಗುವ ಸಾಧ್ಯತೆಯಿದ್ದು, ಇನ್ನೂ 6 ತಿಂಗಳು ದರ ಇಳಿಕೆ ಸಾಧ್ಯತೆ ಇಲ್ಲ. ತೆಂಗಿನಕಾಯಿ ಇಳುವರಿಯಲ್ಲಿ ಕುಂಠಿತವಾಗಿದ್ದು, ತೆಂಗು ದುಬಾರಿಯಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
