
Bidar:ಗುರುದ್ವಾರ ಸ್ಫೋಟಿಸುವ ಬೆದರಿಕೆ ಇ-ಮೇಲ್; ಪೊಲೀಸರಿಂದ ಪರಿಶೀಲನೆ
19/07/2025 06:29 AM
ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ಇದೀಗ ಜುಲೈ19ರಂದು ಬೀದರ್ ನ ಗುರುದ್ವಾರ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಬೀದರ್ ನ ಗುರುದ್ವಾರ ಸ್ಪೋಟಿಸುವುದಾಗಿ ಇ-ಮೇಲ್ ಸಂದೇಶ ಬಂದಿದ್ದು,, ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಅಮೃತ ಕುಂಡ ಯಾತ್ರಿಕ ನಿವಾಸದಲ್ಲಿ ಸ್ಪೋಟ ಆಗುತ್ತದೆ ಎಂದು ವಕೀಲ ಅಲೀಂ ಆಲ್ ಎಂಬಾತ ಇಮೇಲ್ ಕಳುಹಿಸಿದ್ದಾನೆ ಎನ್ನಲಾಗಿದೆ. 30 ಕ್ಕೂ ಹೆಚ್ಚು ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.