Udupi:ಮಲ್ಪೆಯಲ್ಲಿ ಕೋಳಿ ಅಂಕ್ಕೆ ದಾಳಿ: ೬ ಮಂದಿಯ ಬಂಧನ
Tuesday, July 01, 2025
ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಉದಯ ಕೆಮ್ಮಣ್ಣು, ಮಂಜುನಾಥ ಗರಡಿಮಜಲು, ಕಾರ್ತಿಕ್ ಕೊಡವೂರು, ಸುಕೇತ್ ಗರಡಿಮಜಲು, ಸಂದೇಶ ಲಕ್ಷ್ಮೀನಗರ, ಸುಜಿತ್ ಮೂಳೂರು ಎಂದು ಗುರುತಿಸಲಾಗಿದೆ.
.jpeg)
ಬಂಧಿತರಿಂದ ಕೋಳಿಯ ಕಾಲಿಗೆ ಕಟ್ಟಿದ ಬಾಳು, ೮೬೦ರೂ. ನಗದು, ಒಂದು ಜೀವಂತ ಹುಂಜ ಕೋಳಿ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.