
Breaking: ಮೀನುಗಾರಿಕಾ ಬೋಟು ಮುಳುಗಡೆ:ಮೂವರು ಮೀನುಗಾರರು ನಾಪತ್ತೆ; ತೀವ್ರ ಶೋಧ
15/07/2025 05:40 AM
ಮೀನುಗಾರಿಕೆಗೆ ತೆರಳಿದ್ದ ಬೋಟು ಮಗುಚಿ ಬಿದ್ದು, ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದಿದೆ. ನಾಪತ್ತೆಯಾಗಿರುವ ಮೀನುಗಾರರನ್ನು ಸುರೇಶ್ ಖಾರ್ವಿ, ಲೋಹಿತ್, ಜಗದೀಶ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಮೀನುಗಾರ ಸಂತೋಷ್ ಈಜಿ ದಡ ಸೇರಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸಮುದ್ರ ಪ್ರಕ್ಷÄಬ್ದಗೊಂಡಿದೆ. ಗಂಗೊಳ್ಳಿ ಬಂದಿರಿನಿ0ದ ಮೀನುಗಾರಿಕೆಗೆ ತೆರಳಿದ್ದ ಸಿಪಾಯಿ ಸುರೇಶ್ ಮಾಲೀಕತ್ವದ ಬೋಟು ಬೃಹತ್ ಗಾತ್ರದ ಅಲೆಗಳ ರಭಸಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.