
Mangalore: ಕರಾವಳಿಯಲ್ಲಿ ಭಾರೀ ಮಳೆ; 3 ತಾಲೂಕುಗಳ ಶಾಲೆಗಳಿಗೆ ರಜೆ
15/07/2025 05:22 AM
ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಳಿಗೆ ಜುಲೈ 15ರಂದು ತಹಶೀಲ್ದಾರ್ ಅವರು ರಜೆ ಘೋಷಿಸಿದ್ದಾರೆ.ಉಳ್ಳಾಲ ಹಾಗೂ ಕಡಬ ತಾಲೂಕಿನ ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.