Dharmastha: ಸರಣಿ ಹತ್ಯೆ ದೂರು ಪ್ರಕರಣ;ಪಾರದರ್ಶಕ ತನಿಖೆಗೆ ನಟ ಮನವಿ

Dharmastha: ಸರಣಿ ಹತ್ಯೆ ದೂರು ಪ್ರಕರಣ;ಪಾರದರ್ಶಕ ತನಿಖೆಗೆ ನಟ ಮನವಿ



ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣಕ್ಕೆ ಸಂಬ0ಧಿಸಿ ನಟ ರಾಕೇಶ್ ಅಡಿಗ ಪ್ರತಿಕ್ರಿಯಿಸಿದ್ದು, ತುರ್ತಾಗಿ ಪಾರದರ್ಶಕ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಸರಕಾರಕ್ಕೆ, ನಾನು ಬೇಡಿಕೊಳ್ಳುತ್ತೇನೆ, ನಿಮ್ಮ ಜನರ ನಿಟ್ಟುಸಿರಿಗೆ ಎದುರಾಗಿ, ಅವರ ಅಳಲನ್ನು ಆಲಿಸಿ. ತನಿಖೆ ನಡೆಸುವುದು, ಸತ್ಯವನ್ನು ಹೊರಹಾಕುವುದು ಮತ್ತು ನ್ಯಾಯವನ್ನು ಖಚಿತಪಡಿಸುವುದು ನಿಮ್ಮ ಪವಿತ್ರ ಕರ್ತವ್ಯ. ಇನ್ನು ವಿಳಂಬ, ನೆಪಗಳು ಬೇಡ ಎಂದಿದ್ದಾರೆ.ಇದು ರಾಜಕೀಯ ವಿಷಯವಲ್ಲ; ಇದು ಮಾನವೀಯತೆಯ ವಿಷಯ. ಹುಟ್ಟು ಮಾತ್ರವಲ್ಲ, ಸಾವಿನ ಘನತೆಯನ್ನೂ ಎತ್ತಿ ಹಿಡಿಯುವ ವಿಷಯ. ಇದಕ್ಕಾಗಿ ಧ್ವನಿಗಳು ಒಟ್ಟಾಗಬೇಕಾದ ವಿಷಯ. ಸತ್ಯಕ್ಕಾಗಿ ನಮ್ಮ ಸಾಮೂಹಿಕ ಬೇಡಿಕೆಯು ಅಸಡ್ಡೆಯ ಅಡಿಪಾಯವನ್ನು ಅಲುಗಾಡಿಸಲಿ. ಸಿಕ್ಕ ಎಲ್ಲಾ ವೇದಿಕೆಗಳಲ್ಲೂ ನ್ಯಾಯದ ಬೇಡಿಕೆ ಮುಂದಿಡೋಣ. ಸಾಮಾಜಿಕ ಮಾಧ್ಯಮ, ಸಾರ್ವಜನಿಕ ವೇದಿಕೆಗಳು, ನಮ್ಮ ಮನೆಗಳಲ್ಲಿನ ಸಂಭಾಷಣೆಗಳನ್ನು ಈ ಘೋರ ಅನ್ಯಾಯದ ತನಿಖೆಗೆ ಒತ್ತಾಯಿಸಲು ಬಳಸೋಣ ಎಂದು ಹೇಳಿದ್ದಾರೆ.





Ads on article

Advertise in articles 1

advertising articles 2

Advertise under the article