
Dharmasthala: ಶವ ಹೂತಿರುವ ಪ್ರಕರಣ; ಎಸ್‌ಐಟಿಯಿಂದ ದೂರುದಾರನ ವಿಚಾರಣೆ
26/07/2025
ಧರ್ಮಸ್ಥಳದಲ್ಲಿ ಸರಣಿ ಶವಗಳ ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ಎಸ್‌ಐಟಿ ತಂಡ ತನಿಖೆ ಆರಂಭಿಸಿದೆ. ಜುಲೈ 26ರಂದು ಮಂಗಳೂರಿನ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್‌ಐಟಿ ಮುಂದೆ ದೂರುದಾರ ವ್ಯಕ್ತಿ ಹಾಜರಾಗಿದ್ದಾನೆ.
ಮಲ್ಲಿಕಟ್ಟೆಯಲ್ಲಿರುವ ಐಬಿಯಲ್ಲಿ ಎಸ್‌ಐಟಿ ತಂಡಕ್ಕಾಗಿ ಎರಡು ಕೊಠಡಿಗಳನ್ನು ಮೀಸಲಿರಿಸಲಾಗಿದೆ. ಇಲ್ಲಿಗೆ ವಕೀಲರ ಜೊತೆ ಆಗಮಿಸಿರುವ ದೂರುದಾರನ ವಿಚಾರಣೆಯನ್ನು ಎಸ್‌ಐಟಿ ತಂಡ ಆರಂಭಿಸಿದೆ ಎಂದು ತಿಳಿದು ಬಂದಿದೆ. ಜುಲೈ 25ರ ರಾತ್ರಿ ಸಿಐಡಿ ತಂಡದಲ್ಲಿರುವ ಅಧಿಕಾರಿ ಜಿತೇಂದ್ರ ದಯಾಮ ಅವರು ಧರ್ಮಸ್ಥಳ ಠಾಣೆಗೆ ಭೇಟಿ ನೀಡಿ, ಠಾಣಾಧಿಕಾರಿ ಸಮರ್ಥ್ ಗಾಣಿಗೇರ್ ಅವರಿಂದ ಕೆಲವೊಂದು ಕೇಸ್ ಫೈಲ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ತಂಡದಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರುಗಳು, ಸಿಬ್ಬಂದಿಗಳಿದ್ದಾರೆ.