Italy: ಜೆಟ್ ವಿಮಾನ ಪತನ; ನೋಡ ನೋಡುತ್ತಿದ್ದಂತೆ ಬೆಂಕಿಗಾಹಿತಿ
26/07/2025
ಜೆಟ್ ವಿಮಾನವೊಂದು ಆಕಾಶದಿಂದ ರಭಸವಾಗಿ ಬಿದ್ದು ಇಬ್ಬರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ವೀಡಿಯೋವೊಂದು ವೈರಲ್ ಆಗ್ತಾ ಇದೆ. ಈ ಘಟನೆ ನಡೆದಿರುವುದು ಉತ್ತರ ಇಟಲಿಯ ಬ್ರೆಸಿಯಾದ ಹೆದ್ದಾರಿಯಲ್ಲಿ ಎಂದು ಹೇಳಲಾಗ್ತಾ ಇದೆ.
ಜೆಟ್ ವಿಮಾನದಲ್ಲಿ ಮೃತಪಟ್ಟವರನ್ನು ಮಿಲಾನ್ ನಗರದ ಪೈಲಟ್ ಸೆರ್ಗಿಯೋ ರಾವಗ್ಲಿಯಾ (75), ಆನ್ ಮಾರಿಯಾ ಡಿ ಸ್ಟೆಫಾನೊ (60) ಎಂದು ಗುರುತಿಸಲಾಗಿದೆ. ಫ್ರೀಸಿಯಾ ಆರ್‌ಜಿ ಅಲ್ಟಾçಲೈಟ್ ಜೆಟ್ ವಿಮಾನವು ಆಕಾಶದಿಂದ ವೇಗವಾಗಿ ರಸ್ತೆಗೆ ಅಪ್ಪಳಿಸಿದೆ. ನೋಡ ನೋಡುತ್ತಿದ್ದಂತೆ ಜೆಟ್ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದೆ, ಘಟನೆಯಿಂದ ಎರಡು ಕಾರುಗಳಿಗೂ ಬೆಂಕಿ ತಗುಲಿ, ದಟ್ಟ ಹೊಗೆ ಆವರಿಸಿದೆ. ವಿಮಾನ ಆಕಾಶದಿಂದ ಬೀಳುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ವೀಡಿಯೋ ವೈರಲ್ ಆಗ್ತಾ ಇದೆ.