
Kundapura:ಇಸ್ಪೀಟ್ ಅಡ್ಡೆಗೆ ದಾಳಿ: ನಾಲ್ವರ ಬಂಧನ, ಆಟಕ್ಕೆ ಬಳಸಿದ್ದ ವಸ್ತುಗಳ ಜಪ್ತಿ
20/07/2025
ಕು0ದಾಪುರದಲ್ಲಿ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಸಂಜೀವ(47), ಚಂದ್ರ(50), ಕೋಟಿ ಪೂಜಾರಿ(59), ಸಂಪತ್(47) ಬಂಧಿತರು. ಸ್ಥಳದಲ್ಲಿದ್ದ ಗಣೇಶ್ ಹಾಗೂ ಮಂಜುನಾಥ ಪರಾರಿಯಾಗಿದ್ದಾರೆ. ಕುಂದಾಪುರ ತಾಲೂಕಿನ ಕಟ್ ಬೆಲ್ತೂರು ಗ್ರಾಮದ ಹತ್ತಿರ ಕೆರೆ ಬದಿಯ ಖಾಲಿ ಜಾಗದಲ್ಲಿ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದರು. ಮಾಹಿತಿ ತಿಳಿದು ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿ0ದ ಆಟಕ್ಕೆ ಬಳಸಿದ್ದ 1,640 ರೂಪಾಯಿ, ಇಸ್ಪೀಟ್ ಎಲೆಗಳು, ಕಾರು ಹಾಗೂ ಮೋಟಾರ್ ಸೈಕಲ್ನ್ನು ವಶಕ್ಕೆ ಪಡೆಯಲಾಗಿದೆ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.