ನಿತ್ಯವೂ 1.05 ಕೋಟಿ ಲೀ. ಹಾಲು ಉತ್ಪಾದನೆ: KMF ಇತಿಹಾಸದಲ್ಲೇ ಅತೀ ಹೆಚ್ಚು ಹಾಲು ಸಂಗ್ರಹ

ನಿತ್ಯವೂ 1.05 ಕೋಟಿ ಲೀ. ಹಾಲು ಉತ್ಪಾದನೆ: KMF ಇತಿಹಾಸದಲ್ಲೇ ಅತೀ ಹೆಚ್ಚು ಹಾಲು ಸಂಗ್ರಹ


ರಾಜ್ಯದಲ್ಲಿ ಕಳೆದ ಒಂದು 1 ತಿಂಗಳಿ0ದ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಈ ಮೂಲಕ ಕೆಎಂಎಫ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಹಾಲು ಸಂಗ್ರಹಿಸುತ್ತಿದೆ.ಕಳೆದ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಈ ವರ್ಷದ ಮೇ ತಿಂಗಳಾAತ್ಯದಿAದ ನಿತ್ಯ ಕೋಟಿಗಿಂತಲೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಕೆಎಂಎಫ್‌ನಲ್ಲಿ ದಿನನಿತ್ಯ 1.05 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ.ಕಳೆದ ಒಂದು ತಿಂಗಳಿAದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ವಾತಾವರಣ ತಂಪಾದ ಕಾರಣ ಹಸಿರು ಮೇವು ಸಿಗುತ್ತಿದೆ. ಹೀಗಾಗಿ ಹಾಲು ಸಂಗ್ರಹದಲ್ಲಿ ಹೆಚ್ಚಳವಾಗಿದೆ. ನಿತ್ಯ ಸಂಗ್ರಹವಾದ ಒಂದು ಕೋಟಿ ಹಾಲಿನಲ್ಲಿ 80 ಲಕ್ಷ ಲೀಟರ್ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಸಂಗ್ರಹವಾದ ಹೆಚ್ಚುವರಿ ಹಾಲಿನಿಂದ ಹಾಲಿನ ಪುಡಿ, ಮೊಸರು ವಿವಿಧ ಮೌಲ್ಯವರ್ಧಿತ ಉತ್ಪನ್ನ ತಯಾರಿಸಲಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ. ಈ ಬಾರಿ ಮಳೆಗಾಲದಲ್ಲೇ 1.25 ಕೋಟಿ ಲೀಟರ್ ಹಾಲು ಸಂಗ್ರಹ ಗುರಿಯನ್ನು ಹೊಂದಿದ್ದು, ಒಂದು ತಿಂಗಳಿನಿAದ ನಿರಂತರವಾಗಿ 1.05 ಕೋಟಿ ಹಾಲು ಸಂಗ್ರಹವಾಗುತ್ತಿದೆ.








 



Ads on article

Advertise in articles 1

advertising articles 2

Advertise under the article