
Mangalore: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ; ಎಸ್ಐಟಿ ತಂಡ ಆಗಮನ
25/07/2025
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಶವಗಳ ಹೂತಿರುವ ಪ್ರಕರಣದ ವಿಚಾರಣೆ ನಡೆಸಲು ಎಸ್ಐಟಿ ತಂಡ ಮಂಗಳೂರಿಗೆ ಆಗಮಿಸಿದೆ.
ಎಸ್ಐ ಟಿ ತಂಡದ ಅನುಚೇತ್ ಹಾಗೂ ಜಿತೇಂದ್ರ ಕುಮಾರ್ ದಯಾಮ ಮಂಗಳೂರು ಐಜಿ ಕಚೇರಿಗೆ ಆಗಮಿಸಿದರು. ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಹಾಗೂ ದ.ಕ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕುಮಾರ್ ಅವರೊಂದಿಗೆ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿ ನಿರ್ಗಮಿಸಿದ್ದಾರೆ.
ಇನ್ನು ಎಸ್ಐಟಿ ತಂಡಕ್ಕೆ ಧರ್ಮಸ್ಥಳದಲ್ಲಿ ಕಚೇರಿ ಆರಂಭಿಸಲಾಗುತ್ತಿದೆ. ಎಸ್ಐ ಟಿ ತಂಡಕ್ಕೆ ಅನುಕೂಲವಾಗುವಂತೆ ನೂತನ ಪೊಲೀಸ್ ವಸತಿ ಗೃಹದ ನೆಲ ಅಂತಸ್ತಿನ 2 ಕೊಠಡಿಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ.