Manglaore: ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ; ಬೈಕಂಪಾಡಿಯಿಂದ ನಂತೂರುವರೆಗೆ ಟ್ರಾಫಿಕ್ ಜಾಮ್

Manglaore: ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ; ಬೈಕಂಪಾಡಿಯಿಂದ ನಂತೂರುವರೆಗೆ ಟ್ರಾಫಿಕ್ ಜಾಮ್


ಮಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-೬೬ ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್. ಜಂಕ್ಷನ್ನಿ0ದ ಅಯ್ಯಪ್ಪ ಗುಡಿಯವರೆಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಗೊ0ಡಿದೆ. ಈ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಮಾರ್ಪಾಡು ಮಾಡಿರುವುದರಿಂದ ಬೈಕಂಪಾಡಿಯಿ0ದ ನಂತೂರು ವರೆಗೆ ಭಾರೀ ಟ್ರಾಫಿಕ್ ಜಾಮ್  ಉಂಟಾಗಿತ್ತು.


ಬೆಳಗ್ಗೆಯಿ0ದಲೇ ಕೊಟ್ಟಾರ ಚೌಕಿ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿತು. ಕಿಲೋ ಮೀಟರ್ ವರೆಗೆ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿತ್ತು. ಈ ಕಡೆ ಕೆಪಿಟಿ, ನಂತೂರು, ಕೊಟ್ಟಾರದ ವರೆಗೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೆ, ಸೇತುವೆಯಿಂದ ಮುಂದಕ್ಕೆ ಬೈಕಂಪಾಡಿಯನ್ನು ದಾಟಿ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿತ್ತು. ಜು. ೨೨ರ ರಾತ್ರಿ ೮ ಗಂಟೆಯಿ0ದ ಆರಂಭಗೊ0ಡ0ತೆ ಜು.೨೫ರ ಬೆಳಗ್ಗೆ ೮ರ ವರೆಗೆ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್. ಜಂಕ್ಷನ್ನಿ0ದ ಅಯ್ಯಪ್ಪ ಗುಡಿಯವರೆಗೆ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ಈ ಅವಧಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಧ್ಯಾಹ್ನ ಪ್ರಕಟನೆ ಹೊರಡಿಸಿದ್ದರು.


ಹೀಗಾಗಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಇದು ಕೋಡಿಕಲ್ ಕ್ರಾಸ್ನಿಂದ ಕೆ.ಐ.ಓ.ಸಿ.ಎಲ್. ಜಂಕ್ಷನ್ವರೆಗೆ ಹಾಗೂ ಪಣಂಬೂರು ಜಂಕ್ಷನ್ನಿ0ದ ಕೆ.ಐ.ಓ.ಸಿ.ಎಲ್ ಜಂಕ್ಷನ್ವರೆಗೆ ಭಾರೀ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಇಲ್ಲಿ ವಾಹನ ದಟ್ಟಣೆಯಾದಲ್ಲಿ ಬದಲಿ ಮಾರ್ಗವನ್ನು ಬಳಸುವಂತೆ ಈಗಾಗಲೇ ಸೂಚಿಸಿದ್ದಾರೆ. ಆದರೂ ಸಂಚಾರ ಬದಲಾವಣೆ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.




Ads on article

Advertise in articles 1

advertising articles 2

Advertise under the article