
ಹೈದರಾಬಾದ್: ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ೨೯ ಸೆಲೆಬ್ರಿಟಿಗಳ ವಿರುದ್ಧ ಇ.ಡಿ ಎಫ್‌ಐಆರ್
10/07/2025 09:21 AM
ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ೨೯ ಸೆಲೆಬ್ರಿಟಿಗಳ ವಿರುದ್ಧ ಇ.ಡಿ ಎಫ್‌ಐಆರ್ ದಾಖಲಿಸಿದೆ. ಪ್ರಕಾಶ್ ರಾಜ್, ನಿಧಿ ಅಗರ್‌ವಾಲ್, ವಿಜಯ್ ದೇವರಕೊಂಡ ಸೇರಿ ೨೯ ಮಂದಿ ಸೆಲೆಬ್ರಿಟಿಗಳ ವಿರುದ್ಧ ಹೈದರಾಬಾದ್‌ನ ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ೨೯ ಮಂದಿಯ ವಿರುದ್ಧ ಭಾರತ್ ನ್ಯಾಯ ಸಂಹಿತಾ ಸೆಕ್ಷನ್ ೪೯, ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆಯ ಸೆಕ್ಷನ್ ೪ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೬-ಡಿ ಜೊತೆಗೆ ಸೆಕ್ಷನ್ ೩೧೮(೪) ಮತ್ತು ೧೧೨ರ ಅಡಿಯಲ್ಲಿ ದೂರು ದಾಖಲಾಗಿದೆ.