New Delhi: ಡಿಆರ್‌ಡಿಓಯಿಂದ ಯುಎಲ್‌ಪಿಜಿಎಂ- ವಿ3; ಕರ್ನೂಲ್‌ನಲ್ಲಿ ಯಶಸ್ವಿ ಉಡಾವಣೆ

New Delhi: ಡಿಆರ್‌ಡಿಓಯಿಂದ ಯುಎಲ್‌ಪಿಜಿಎಂ- ವಿ3; ಕರ್ನೂಲ್‌ನಲ್ಲಿ ಯಶಸ್ವಿ ಉಡಾವಣೆ


ಡ್ರೋನ್ ಮೂಲಕ ಉಡಾಯಿಸುವ ಯುಎಲ್‌ಪಿಜಿಎಂ-ವಿ3 ಎಂಬ ಹೆಸರಿನ ಕ್ಷಿಪಣಿಯನ್ನು ಡಿಆರ್‌ಡಿಓ ಅಭಿವೃದ್ಧಿಪಡಿಸಿದ್ದು, ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿರುವ ನ್ಯಾಷನಲ್ ಓಪನ್ ಏರಿಯಾ ರೇಂಜ್ ಪರೀಕ್ಷಾ ಕೇಂದ್ರದಲ್ಲಿ ಕ್ಷಿಪಣಿಯನ್ನು ಉಡಾಯಿಸಲಾಯಿತು. 

ಬೆಂಗಳೂರು ಮೂಲದ ನವೋದ್ಯಮವಾದ ನ್ಯೂಸ್ಪೇಸ್ ರಿಸರ್ಚ್ ಟೆಕ್ನಾಲಜೀಸ್ ನಿರ್ಮಿಸಿರುವ ಡ್ರೋನ್‌ಗಳಿಂದ ಕ್ಷಿಕಣಿಯನ್ನು ಯಶಸ್ವೀಯಾಗಿ ಉಡಾಯಿಸಲಾಯಿತು. 


ವಿ 3 ಕ್ಷಿಪಣಿಯು ಈ ಹಿಂದೆ ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದ ವಿ2 ಮತ್ತು ವಿ1 ಕ್ಷಿಪಣಿಗಳ ಸುಧಾರಿತ ಆವೃತ್ತಿ. ಭೂಮಿಯ ಮೇಲಿನ ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸುವಂತೆ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗಿದೆ. ಹಗಲು, ರಾತ್ರಿ, ಮೈದಾನ ಅಥವಾ ಎತ್ತರ ಪ್ರದೇಶದಲ್ಲೂ ಕಾರ್ಯಾಚರಿಸಬಲ್ಲ ಈ ಕ್ಷಿಪಣಿ 3 ಮಾದರಿಯ ವಿನಾಶಕಾರಿ ಸಿಡಿ ತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. 

ಯುಎಲ್‌ಪಿಜಿಎಂ-ವಿ3 ಯಶಸ್ವೀ ಉಡಾವಣೆ ಪರೀಕ್ಷೆಯ ವೀಡಿಯೋವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ಕ್ಷಿಪಣಿ ಅಭಿವೃದ್ಧಿಪಡಿಸುವಲ್ಲಿ ಸಹಕರಿಸಿದವರಿಗೆ ರಾಜನಾಥ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ. 


Ads on article

Advertise in articles 1

advertising articles 2

Advertise under the article