
NewDelhi: ಸುರಕ್ಷತಾ ಕ್ರಮಗಳ ಉಲ್ಲಂಘನೆ; ಏರ್ ಇಂಡಿಯಾಗೆ 9 ಶೋಕಾಸ್ ನೋಟೀಸ್
22/07/2025 04:45 AM
ಏರ್ ಇಂಡಿಯಾದಲ್ಲಿ ಗುರುತಿಸಲಾದ ಐದು ಸುರಕ್ಷಾ ಕ್ರಮಗಳ ಉಲ್ಲಂಘನೆಗಳಿಗಾಗಿ ಕಳೆದ ಆರು ತಿಂಗಳಲ್ಲಿ ವಿಮಾನಯಾನ ಸಂಸ್ಥೆಗೆ ಒಂಬತ್ತು ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಬಗ್ಗೆ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೊಲ್ ಬಹಿರಂಗಪಡಿಸಿದ್ದಾರೆ. ಒಂದು ಉಲ್ಲಂಘನೆಗೆ ಸಂಬ0ಧಿಸಿದ0ತೆ ಕಾನೂನು ಜಾರಿ ಕ್ರಮ ಪೂರ್ಣಗೊಂಡಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಅಹ್ಮದಾಬಾದ್ ನಲ್ಲಿ ಜೂನ್ 12ಕ್ಕೆ ದುರಂತಕ್ಕೀಡಾದ ಎಐ ಡ್ರೀಮ್ಲೈನರ್ನ ವಿಶ್ವಾಸಾರ್ಹತೆ ವರದಿಯಲ್ಲಿ ಕಳೆದ ಆರು ತಿಂಗಳಲ್ಲಿ ಯಾವುದೇ ಪ್ರತಿಕೂಲ ಪ್ರವೃತ್ತಿ ಕಂಡುಬ0ದಿಲ್ಲ ಎಂದು ಹೇಳಿದ್ದಾರೆ.