NewDelhi: ಬಾಹ್ಯಾಕಾಶದಿಂದ ಭೂಮಿಯತ್ತ ಹೊರಟ ಶುಭಾಂಶು ಶುಕ್ಲಾ

NewDelhi: ಬಾಹ್ಯಾಕಾಶದಿಂದ ಭೂಮಿಯತ್ತ ಹೊರಟ ಶುಭಾಂಶು ಶುಕ್ಲಾ


ಆಕ್ಸಿಯಮ್-4 ಅಡಿಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭಾರತಕ್ಕೆ ವಾಪಾಸಾಗುತ್ತಿದ್ದಾರೆ. ಡ್ರ‍್ಯಾಗನ್ ನೌಕೆ ಮೂಲಕ ಭೂಮಿಯತ್ತ ಆಗಮಿಸುತ್ತಿರುವ ನಾಲ್ವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿ0ದ ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ಐಎಸ್‌ಎಸ್‌ನಿಂದ ಯಶಸ್ವಿಯಾಗಿ ಹೊರಟಿರುವ ಡ್ರ‍್ಯಾಗನ್ ನೌಕೆ ಜುಲೈ 15ರಂದು ಮಧ್ಯಾಹ್ನ 3ಕ್ಕೆ (ಭಾರತೀಯ ಕಾಲಮಾನ) ಭೂಮಿ ತಲುಪಲಿದೆ. ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವ್ಹಿಟ್ಸನ್, ಪೋಲೆಂಡ್‌ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನೀವ್ಸ್ಕಿ , ಹಂಗೇರಿಯದ ಗಗನಯಾನಿ ಟಿಬೋರ್ ಕಾಪು ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. 


ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಬಾಹ್ಯಾಕಾಶಯಾನ ಮುಗಿಸಿ ಭೂಮಿಯತ್ತ ಪ್ರಯಾಣ ಮಾಡಿರುವ ಈ ಗಗನಯಾತ್ರಿಗಳನ್ನು ಹೊತ್ತು ಕರೆತರುತ್ತಿರುವ ಡ್ರ‍್ಯಾಗನ್ ನೌಕೆ ಜುಲೈ 15ರಂದು ಮಧ್ಯಾಹ್ನ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಇಳಿಯಲಿದೆ. ಈ ಸಮಯ ಸರಿಸುಮಾರು 1 ಗಂಟೆಯ ಅಂತರವನ್ನು ಹೊಂದಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. 




Ads on article

Advertise in articles 1

advertising articles 2

Advertise under the article