
NewDelhi: ಮಲೇರಿಯಾ ತಡೆಗೆ ದೇಸಿ ಲಸಿಕೆ; ಆಡ್‌ಫಾಲ್ಸಿವ್ಯಾಕ್ಸ್ ತಯಾರಿ ಆರಂಭ
21/07/2025 05:19 AM
ಮಲೇರಿಯಾ ರೋಗದ ತಡೆಗೆ ಮಹತ್ವದ ಹೆಜ್ಜೆಯಿಟ್ಟಿರುವ ಭಾರತ, ಆಡ್‌ಫಾಲ್ಸಿವ್ಯಾಕ್ಸ್ ಎಂಬ ದೇಶೀ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಆಡ್‌ಫಾಲ್ಸಿ ವ್ಯಾಕ್ಸ್ ಒಂದು ವಿಶಿಷ್ಟ ಮಲೇರಿಯಾ ವಿರೋಧಿ ಲಸಿಕೆಯಾಗಿರಲಿದ್ದು, ಪ್ಲಾಸ್ಮೋ ಡಿಯಂ ಎಂಬ ಪರಾವಲಂಬಿ ಸೂಕ್ಷö್ಮ ಜೀವಿಯ ಜೀವನ ಚಕ್ರದ ಒಂದು ಹಂತವನ್ನಷ್ಟೇ ಕುಂಠಿತಗೊಳಿಸದೇ, 2 ಹಂತವನ್ನು ಗುರಿಯಾಗಿಸುತ್ತದೆ. ಈ ಔಷಧಿ ಮಾನವನ ದೇಹದಲ್ಲಿ ಪರಾವಲಂಬಿಯ ಸಂಖ್ಯೆ ವೃದ್ಧಿಸುವುದನ್ನು ತಗ್ಗಿಸಿ, ಸೋಂಕು ಉಲ್ಬಣಗೊಳ್ಳದಂತೆ ತಡೆಯುವ ಜತೆಗೆ, ಸೋಂಕಿತನ ರಕ್ತ ಒಯ್ಯುವ ಸೊಳ್ಳೆಗಳಲ್ಲಿಯೂ ಪರಾವಲಂಬಿಯ ಸಂಖ್ಯೆ ವೃದ್ಧಿಯಾಗುವುದನ್ನು ತಗ್ಗಿಸಲಿದೆ.