Russia: ವಿಮಾನ ಉರುಳಿ 50ಕ್ಕೂ ಅಧಿಕ ಪ್ರಯಾಣಿಕರ ಸಾವು
24/07/2025
ಸೈಬೇಯಾದ ಪ್ರಯಾಣಿಕ ವಿಮಾನವೊಂದು ಈಶಾನ್ಯ ರಷ್ಯಾದ ಅಮೂರ್ ಪ್ರಾಂಥ್ಯದಲ್ಲಿ ನೆಲಕ್ಕಪ್ಪಳಿಸಿ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಮೃತಪಟ್ಟವರಲ್ಲಿ ಐವರು ಮಕ್ಕಳು ಹಾಗೂ ಆರು ಮಂದಿ ವಿಮಾನ ಸಿಬ್ಬಂದಿಯೂ ಸೇರಿದ್ದಾರೆ ಎಂದು ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಟಾಸ್ ವರದಿ ಮಾಡಿದೆ.
ಅಂಗಾರ ಎಎನ್ 14 ಹೆಸರಿನ ವಿಮಾನವು ಚೀನಾ ಗಡಿ ಭಾಗದ ಟಿಂಡಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮೊದಲು ರಾಡಾರ್ ನಿಂದ ಸಂಪರ್ಕ ಕಳೆದುಕೊಂಡ ಬಳಿಕ ಈ ಅಪಘಾತ ಸಂಭವಿಸಿದ್ದು, ಮಬ್ಬು ಬೆಳಕಿನಲ್ಲಿ ಪೈಲಟ್ ನ ಚಾಲನಾ ದೋಷವೇ ಅಪಘಾತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ದಟ್ಟ ಅರಣ್ಯದಲ್ಲಿ ಉರಿಯುವ ಸ್ಥಿತಿಯಲ್ಲಿ ವಿಮಾನದ ಅವಶೇಷಗಳನ್ನು ಹೆಲಿಕಾಫ್ಟರ್ ಮೂಲಕ ಪತ್ತೆ ಹಚ್ಚಲಾಗಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.