Shimogga: ಶರಾವತಿ ದ್ವೀಪ ಜನರ ಕನಸು ಈಗ ನನಸು- ತೆಪ್ಪದ ಪಯಣಕ್ಕಿನ್ನು ಇತಿಶ್ರೀ

Shimogga: ಶರಾವತಿ ದ್ವೀಪ ಜನರ ಕನಸು ಈಗ ನನಸು- ತೆಪ್ಪದ ಪಯಣಕ್ಕಿನ್ನು ಇತಿಶ್ರೀ



ಶಿವಮೊಗ್ಗ ಜಿಲ್ಲೆಯ ಶರಾವತಿ ದ್ವೀಪದ ಜನರ ದಶಕಗಳ ಬೇಡಿಕೆಯು ಕೊನೆಗೂ ಈಡೇರಿದೆ. ಸಿಗಂದೂರಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ದೇಶದ ಅತೀ ಉದ್ದದ ಎರಡನೇ ಕೇಬಲ್ ಸೇತುವೆ ಜುಲೈ 14ರಂದು ಲೋಕಾರ್ಪಣೆಗೊಂವಿತು. ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೇಬಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ರು.  ಶರಾವತಿ ದ್ವೀಪದ ಜನರ ಬೇಡಿಕೆಯಂತೆ  2010ರಲ್ಲಿ ಪ್ರಾರಂಭವಾದ ಸೇತುವೆಯು 2025ರಲ್ಲಿ ಮುಕ್ತಾಯವಾಗಿದೆ. ಸೇತುವೆಗೆ ಸುಮಾರು 423.15 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೇತುವೆ ನಿರ್ಮಾಣಕ್ಕಾಗಿ ಸಾಗರ ಪಟ್ಟಣದಿಂದ ಹೊಸನಗರ ತಾಲೂಕಿನ ಮರಕುಟುಕದ ತನಕ ಗ್ರಾಮೀಣ ಭಾಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ಡರ್ಜೆಗೆ ಏರಿಸಿ ಮೊದಲ ಹಂತದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. 

ಇಂದು ಬೆಳಗ್ಗೆ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ನಾಗಪುರದಿಂದ ವಿಶೇಷ ವಿಮಾನದಿಂದ ಹೊರಟು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು. ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಸಿಗಂದೂರು ಬಳಿಯಲ್ಲಿ ನಿರ್ಮಾಣ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿದು ಸಿಗಂದೂರು ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದು, ಸೇತುವೆ ಉದ್ಘಾಟನೆ ಮಾಡಿದ್ರು.. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಸಂಸದ ಬಿ. ವೈ. ರಾಘವೇಂದ್ರ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರುಗಳು ಭಾಗಿಯಾಗಿದ್ದರು. 





Ads on article

Advertise in articles 1

advertising articles 2

Advertise under the article