
Udupi: ಲಯನ್ಸ್ ಕ್ಯಾಲೆಂಡರ್ ಇವೆಂಟ್ ವನಮೋತ್ಸವ; ಗೋಶಾಲೆಗೆ ರೂ.2000 ಧನ ಸಹಾಯ
21/07/2025 10:34 AM
ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ವತಿಯಿಂದ ಲಯನ್ಸ್ ಕ್ಯಾಲೆಂಡರ್ ಇವೆಂಟ್ ವನಮೋತ್ಸವ ಕಾರ್ಯಕ್ರಮವನ್ನು ವಕ್ವಾಡಿಯ ಹೂವಿನಕೆರೆ ಮಠದ ಕಾಮಧೇನು ಗೋ ಸೌರಕ್ಷಣೆ ಕೇಂದ್ರ ದ ಗೋಶಾಲೆಯ ವಠಾರದಲ್ಲಿ ನಡೆಸಲಾಯಿತು. ನಮ್ಮ ಪೇರೆಂಟ್ ಕ್ಲಬ್ ನ Ln ಏಕನಾಥ್ ಬೋಳಾರ್ , Ln ರಮಾ ಬೋಳಾರ್ ಹಾಗೂ ಗೋಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗೋಶಾಲ ವಠಾರದಲ್ಲಿ ಗಿಡಗಳನ್ನು ನೀಡಲಾಯಿತು.
ಅಂತೆಯೇ
ಗೋಶಾಲ ಸಿಬ್ಬಂದಿ ವರ್ಗದವರಿಗೆ ಪರಿಸರ ಸಂರಕ್ಷಣೆಯ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುವ ಮಾತುಗಳನ್ನು ಲಯನ್ಸ್ ಅಧ್ಯಕ್ಷ Ln ಕಲ್ಪನಾ
ಭಾಸ್ಕರ್ ಆಡಿದರು, Ln ಏಕನಾಥ್ ಬೋಳಾರ್ ಹಾಗೂ Ln ರಮಾ
ಬೋಳಾರ್ ಶುಭ
ಹಾರೈಸಿದರು. ಕಾರ್ಯದರ್ಶಿ Ln ಚಂದ್ರಿಕಾ
ಧನ್ಯ ಸ್ವಾಗತಿಸಿ
ಕಾರ್ಯಕ್ರಮ ನಿರ್ವಹಿಸಿದರು. ಖಜಾಂಜಿ Ln ಆಶಾಲತಾ
ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕ್ಲಬ್ನ ಸ್ಥಾಪಕ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು. ಕಾಮಧೇನು ಗೋ ಸಂರಕ್ಷಣ ಕೇಂದ್ರ
ದ ಗೋಶಾಲೆಗೆ ಗೋಗ್ರಾಸಕ್ಕಾಗಿ ರೂ2000 ಧನ ಸಹಾಯ ನೀಡಲಾಯಿತು.