
Udupi: ಜು. 29ರಂದು ನಾಗರ ಪಂಚಮಿ; ನಗರದ ತುಂಬೆಲ್ಲಾ ಖರೀದಿ ಭರಾಟೆ
28/07/2025
ನಾಗರ ಪಂಚಮಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಜುಲೈ 29ರಂದು ನಾಡಿನೆಲ್ಲೆಡೆ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ. ನಾಗರ ಪಂಚಮಿಯ ಮುನ್ನ ದಿನವಾದ ಸೋಮವಾರ (ಜುಲೈ 28)ದಂದು ಉಡುಪಿ ನಗರದಲ್ಲೆಲ್ಲಾ ಖರೀದಿಯ ಭರಾಟೆ ಜೋರಾಗಿತ್ತು.
ಹೂವು, ಹಣ್ಣುಗಳು, ತರಕಾರಿಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದರು. ಉಡುಪಿಯ ಕೃಷ್ಣಮಠದ ರಥಬೀದಿಯ ತುಂಬೆಲ್ಲಾ ಸೇವಂತಿಗೆ, ಕೇದಗೆ, ಹಿಂಗಾರ, ಸಿಯಾಳ ವ್ಯಾಪಾರ ಬಲು ಜೋರಾಗಿತ್ತು. ಪ್ರತೀ ವರ್ಷದಂತೆ ಈ ವರ್ಷವೂ ಹಣ್ಣು ತರಕಾರಿ, ಹೂವಿನ ಬೆಲೆ ಏರಿಕೆಯಾಗಿದೆ. ಇನ್ನು ಉಡುಪಿ ಕೃಷ್ಣಮಠದ ರಥಬೀದಿ ಮಾತ್ರವಲ್ಲದೇ ನಗರದ ರಸ್ತೆ ಬದಿಯಲ್ಲೂ ಸೇವಂತಿ ಹೂವುಗಳ ಮಾರಾಟ ಜೋರಾಗಿ ನಡೆಯುತ್ತಿತ್ತು. ಹಾಸನ ಮೊದಲಾದ ಕಡೆಗಳಿಂದ ಬಂದ ಹೂವಿನ ವ್ಯಾಪಾರಿಗಳು ವ್ಯಾಪಾರ ಕುದುರಿಸಿಕೊಳ್ಳುವ ದೃಶ್ಯ ಕಂಡು ಬಂತು.