Udupi: ಜು.4ರಿಂದ6 ರವರೆಗೆ ಉಡುಪಿಯಲ್ಲಿ ಬೃಹತ್ ಹಲಸು-ಮಾವು-ಕೃಷಿ- ಕೌಶಲ ಮೇಳ
Wednesday, July 02, 2025
ಹಲಸು- ಮಾವು- ಕೃಷಿ- ಕರಕುಶಲ, ಸಾಂಪ್ರದಾಯಿಕ ಬೆಳೆ ಮತ್ತು ತಿಂಡಿ ತಿನಿಸುಗಳನ್ನು ಈ ಬಿರುಸಿನ ಮಳೆಗಾಲದಲ್ಲೂ ಉಡುಪಿಯ ಜನರಿಗೆ ಒದಗಿಸುವ ಸಲುವಾಗಿ ಬೃಹತ್ ಹಲಸು- ಮಾವು-ಕೃಷಿ- ಕೌಶಲ ಮೇಳವನ್ನು ಜುಲೈ 4, 5 ಮತ್ತು 6 ರಂದು ಉಡುಪಿಯ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದ ವಠಾರದಲ್ಲಿ ಆಯೋಜಿಸಲಾಗಿದೆ.
ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯಗಳಾದ ಹೋಳಿಗೆ,ಜಿಲೇಬಿ, ಸಾಟ್, ಕಡುಬು, ಮುಳ್ಕ, ಕೇಸರಿ ಬಾತ್, ಪಾಯಸ, ಹಪ್ಪಳ,ಸೆಂಡಿಗೆ, ಚಿಪ್ಸ್, ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಹಲಸಿನ ಐಸ್ ಕ್ರೀಮ್, ಕೈಮಗ್ಗ- ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
