
Udupi: ಜಾಗೃತಿ ವೀಡಿಯೋಗೆ ನೆಟ್ಟಿಗರ ಆಕ್ಷೇಪ: ವೀಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ ಶಿಕ್ಷಕಿ
16/07/2025 07:34 AM
ಡಾನ್ಸ್ ಮಾಡುತ್ತಾ ಮಕ್ಕಳೊಂದಿಗೆ ಮಗುವಾಗಿ ಬೆರೆಯುತ್ತಿದ್ದ ಕಾರ್ಕಳ ತಾಲೂಕಿನ ಶಿಕ್ಷಕಿ ವಂದನಾ ರೈ ಅವರು ಮಾಡಿದ ಜಾಗೃತಿ ಮೂಡಿಸುವ ವೀಡಿಯೋವೊಂದು ಟೀಕೆಗೆ ಗುರಿಯಾಗಿ, ಕ್ಷಮೆ ಕೇಳುವಷ್ಟರ ಮಟ್ಟಿಗೆ ಹೋಗಿದೆ. ಮೊಬೈಲ್ ಅಡಿಕ್ಷನ್ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಕ್ಷಕಿ ವಂದನಾ ರೈ ಅವರು ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ವಿದ್ಯಾರ್ಥಿನಿಯೊಬ್ಬಳ ಕಣ್ಣಿಗೆ ಬಟ್ಟೆ ಕಟ್ಟಿ, ಮೊಬೈಲ್ ಬಳಕೆಯಿಂದ ಕಣ್ಣು ಕಳೆದುಕೊಂಡ ಬಗ್ಗೆ ಮಕ್ಕಳಲ್ಲಿ ಭಯ ಹುಟ್ಟಿಸಲು ಈ ಸ್ಕಿಟ್ ಮಾಡಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.
ಈ ಜಾಗೃತಿ ವೀಡಿಯೋಗೆ ನಟ್ಟಿಗರಿಂದ ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಕಿ ವಂದನಾ ರೈ ಅವರು ವೀಡಿಯೋವನ್ನು ಡಿಲೀಟ್ ಮಾಡಿ, ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬೇಸರ ಹೊರ ಹಾಕಿರುವ ವಂದನಾ ರೈ, ನಾನು ಇರುವುದೇ ಮಕ್ಕಳಿಗಾಗಿ ಎಂದಿದ್ದಾರೆ.