
Udupi:ಆರ್ಸಿಬಿ ಕಾಲ್ತುಳಿತ ಪ್ರಕರಣ; ಐಪಿಎಸ್ ಅಧಿಕಾರಿ ವಿರುದ್ಧ ಪಿತೂರಿ ಎಂದ ಮಾಜಿ ಡಿವೈಎಸ್ಪಿ
19/07/2025
ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತ ಘಟನೆಯು ಐಪಿಎಸ್ ಅಧಿಕಾರಿ ದಯಾನಂದ್ ಅವರನ್ನು ಗುರಿಯಾಗಿಸಲು ಸಿಎಂ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ರೂಪಿಸಿದ ಪಿತೂರಿಯ ಭಾಗ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅನುಪಮಾ ಶೆಣೈ, ಆರ್ಸಿಬಿ ಕಾಲ್ತುಳಿತಕ್ಕೆ ಸಂಬ0ಧಿಸಿದ0ತೆ ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಿರುವ ವರದಿಯನ್ನು ಖಂಡಿಸಿದರು.
"ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಆರ್ಸಿಬಿ ಕಾಲ್ತುಳಿತಕ್ಕೆ ಸಂಬ0ಧಿಸಿದ0ತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಈ ವರದಿಯು ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಆರೋಪಿಯನ್ನಾಗಿ ಮಾಡಿದೆ, ವಿರಾಟ್ ಕೊಹ್ಲಿಯನ್ನು ಕಾಲ್ತುಳಿತದಲ್ಲಿ ಆರೋಪಿಯನ್ನಾಗಿ ಮಾಡುವ ಸರ್ಕಾರದ ಈ ವರದಿಯನ್ನು ವಿರೋಧಿಸುವುದಾಗಿ ಹೇಳಿದ್ರು. ವರದಿಯ ಪ್ರಕಾರ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊವನ್ನು ನೋಡಿದ 16 ಲಕ್ಷಕ್ಕೂ ಹೆಚ್ಚು ಜನರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದು ಕಾಲ್ತುಳಿತ ಸಂಭವಿಸಿದೆ ಎಂದಿದೆ. ಆರ್ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಮೊದಲ ಟ್ವೀಟ್ಗೆ 16 ಲಕ್ಷ ವೀಕ್ಷಣೆಗಳು, ಎರಡನೇ ಟ್ವೀಟ್ಗೆ 7.6 ಲಕ್ಷ ವೀಕ್ಷಣೆಗಳು ಮತ್ತು ಮೂರನೇ ಟ್ವೀಟ್ಗೆ 17 ಲಕ್ಷ ವೀಕ್ಷಣೆಗಳು ಬಂದಿವೆ ಎಂದು ವರದಿ ಹೇಳುತ್ತದೆ" ಎಂದು ಹೇಳಿದರು. "ಪ್ರಪಂಚದಾದ್ಯ0ತ ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳನ್ನು ವೀಕ್ಷಿಸುತ್ತಾರೆ. ಪೋಸ್ಟ್ ನೋಡಿದ ಪ್ರತಿಯೊಬ್ಬರೂ ಅದೇ ದಿನ ವಿಮಾನ ಹತ್ತಿ ಈ ಕಾರ್ಯಕ್ರಮಕ್ಕೆ ಹಾಜರಾದರೇ? ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಮಾಹಿತಿ ಸಂಗ್ರಹಿಸಿ, ಅದನ್ನು ವೀಕ್ಷಿಸಿದ ಎಲ್ಲ ಜನರ ಉಪಸ್ಥಿತಿಯನ್ನು ಸಿದ್ದರಾಮಯ್ಯ ಅವರು ಪರಿಶೀಲಿಸಿದ್ದಾರೆಯೇ? ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಐವರು ಪೊಲೀಸ್ ಅಧಿಕಾರಿಗಳ ಅಮಾನತು ಕುರಿತು ಮ್ಯಾಜಿಸ್ಟ್ರಿಯಲ್ ತನಿಖೆ ನಡೆಸುತ್ತಿದ್ದು, ಅವರಿಗೆ ಆರ್ಸಿಬಿ ಕಾಲ್ತುಳಿತಕ್ಕೆ ಕಾರಣವಾದ ಅಂಶಗಳ ಬಗ್ಗೆ ಪತ್ರ ಬರೆದಿದ್ದೇನೆ ಎಂದರು. ತಾನು ಬರೆದ ಪತ್ರದಲ್ಲಿ, ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಕಳ್ಳಸಾಗಣೆ ಮಾಫಿಯಾ, ಐಪಿಎಸ್ ಅಧಿಕಾರಿ ದಯಾನಂದ್ ಅವರು ಕರ್ನಾಟಕದ ಮುಂದಿನ ಡಿಜಿಪಿ ಮತ್ತು ಐಜಿಪಿ ಆಗುವುದನ್ನು ತಡೆಯಲು ಬಯಸಿದೆ. ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯ ಗೂಂಡಾಗಳು ಮತ್ತು ಗಲಭೆಕೋರರ ಸಹಾಯದಿಂದ ಪಿತೂರಿ ರೂಪಿಸಿ ಗೊಂದಲವನ್ನು ಸೃಷ್ಟಿಸಿ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ನಾನು ವಿವರಿಸಿದ್ದೇನೆ" ಎಂದರು. ಸರ್ಕಾರವು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯನ್ನು ತಕ್ಷಣವೇ ಹಿಂಪಡೆಯುವ0ತೆ ಮತ್ತು ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ಅಭಿಮಾನಿಗಳಿಗೆ ಕ್ಷಮೆಯಾಚಿಸುವಂತೆ ಅನುಪಮಾ ಶೆಣೈ ಒತ್ತಾಯಿಸಿದರು.