Dharmasthala: 2015ರವರೆಗಿನ ಅಸಹಜ ಸಾವಿನ ಕೇಸ್ ಫೈಲೇ ಡಿಲೀಟ್; ಆರ್‌ಟಿಐನಿಂದ ಮಾಹಿತಿ

Dharmasthala: 2015ರವರೆಗಿನ ಅಸಹಜ ಸಾವಿನ ಕೇಸ್ ಫೈಲೇ ಡಿಲೀಟ್; ಆರ್‌ಟಿಐನಿಂದ ಮಾಹಿತಿ


ಧರ್ಮಸ್ಥಳದಲ್ಲಿ ನಡೆದಿರುವ 15 ವರ್ಷಗಳ ಹಿಂದಿನ ಅಸಹಜ ಸಾವು ಪ್ರಕರಣಗಳ ಪ್ರಮುಖ ದಾಖಲೆಗಳನ್ನು ನಾಶಪಡಿಸಲಾಗಿದೆ ಎನ್ನುವ ವಿಚಾರ ಮಾಹಿತಿ ಹಕ್ಕಿನಿಂದ ಬಯಲಾಗಿದೆ.
  

2000 ದಿಂದ 2015ರ ನಡುವೆ ನಡೆದಿರುವ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ಪೊಲೀಸರ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿಗಳು, ನೋಟೀಸ್‌ಗಳು ಹಾಗೂ ಮೃತ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ಬಳಸಲಾದ ದಾಖಲೆಗಳನ್ನು ಕೋರ್ಟಿನ ಅನುಮತಿ ಪಡೆದು, ಆಡಳಿತಾತ್ಮಕ ಆದೇಶಗಳಿಗೆ ಅನುಗುಣವಾಗಿ ನಾಶಪಡಿಸಲಾಗಿದೆ ಎಂದು ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಧರ್ಮಸ್ಥಳದಲ್ಲಿ ನಡೆದಿದ್ದ ಅಸಹಜ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಅಲ್ಲದೇ ಅಸಹಜ ಸಾವು ಪ್ರಕರಣದ ಪ್ರಮುಖ ದಾಖಲೆಗಳನ್ನು ನಾಶಪಡಿಸಿರುವ ಪೊಲೀಸರ ಮೇಲೆ ಸಾರ್ವಜನಿಕ ವಲಯದಿಂದ ಅನುಮಾನ ವ್ಯಕ್ತವಾಗುತ್ತಿದೆ. 

ಧರ್ಮಸ್ಥಳದಲ್ಲಿ ಸರಣಿ ಶವಗಳನ್ನು ತಾನೇ ಹೂತಿರುವುದಾಗಿ ದೂರುದಾರ ಆರೋಪಿಸಿದ್ದು, ಅದರಂತೆ ತನಿಖೆಗಾಗಿ ನೇಮಿಸಿರುವ ಎಸ್‌ಐಟಿ ತಂಡ ಶೋಧ ಕಾರ್ಯ ಮುಂದುವರಿಸಿದೆ. ಅಲ್ಲದೇ ಧರ್ಮಸ್ಥಳ ಠಾಣೆಗೆ ಭೇಟಿ ನೀಡಿ, ದಾಖಲೆಗಳನ್ನು ಕೂಡಾ ತಂಡ ಪರಿಶೀಲಿಸಿದೆ. ಈ ನಡುವೆ ಆರ್‌ಟಿಐನಲ್ಲಿ 2000ದಿಂದ 2015ರ ಒಳಗೆ ನಡೆದಿರುವ ಅಸಹಜ ಸಾವಿನ ಪ್ರಕರಣಗಳ ದಾಖಲೆಗಳನ್ನು ಕೇಳಲಾಗಿತ್ತು. ಇದಕ್ಕೆ ಬೆಳ್ತಂಗಡಿ ಠಾಣೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರತಿಕ್ರಿಯಿಸಿದ್ದು, ವಿವಿಧ ಸುತ್ತೋಲೆಗಳು ಹಾಗೂ ಕಾರ್ಯವಿಧಾನಗಳ ಅಡಿಯಲ್ಲಿ ದಾಖಲೆಗಳನ್ನು ವಿಲೇವಾರಿ ಮಾಡಲಾಗಿದೆ. ಹಾಗಾಗಿ ಪ್ರಕರಣದ ದಾಖಲೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ದಾಖಲೆಗಳನ್ನು ನಾಶಪಡಿಸಿರುವ ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.


Ads on article

Advertise in articles 1

advertising articles 2

Advertise under the article