
New Delhi: 2022- 24ನೇ ರಾಷ್ಟ್ರಪತಿ ಪದಕ ಪ್ರಕಟ; ಐಪಿಎಸ್ ಅಧಿಕಾರಿ ಬಿ. ದಯಾನಂದ್‌ಗೂ ಪ್ರಶಸ್ತಿ
02/08/2025
2022- 24ನೇ ಸಾಲಿನ ರಾಷ್ಟçಪತಿ ಪದಕ ಪ್ರಕಟವಾಗಿದೆ. ಐಪಿಎಸ್ ಅಧಿಕಾರಿ ಬಿ. ದಯಾನಂದ್ ಸೇರಿ ಹಲವರ ಹೆಸರು ಪ್ರಶಸ್ತಿಯ ಪಟ್ಟಿಯಲ್ಲಿದೆ.
2022, 2023 ಮತ್ತು 2024 ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರö್ಯ ದಿನಾಚರಣೆ ಸಂದರ್ಭ ಘೋಷಿಸಲಾದ ರಾಷ್ಟçಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ ಹಾಗೂ ಪೊಲೀಸ್ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ಅಧಿಕಾರಿ ಹಾಗೂ ಸಿಬ್ಬಂದಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಐಪಿಎಸ್ ಅಧಿಕಾರಿಗಳಾದ ಬಿ. ದಯಾನಂದ, ಆರ್. ಹಿತೇಂದ್ರ,, ರವಿಕಾಂತೇಗೌಡ ಅವರು ಸೇರಿದಂತೆ 119 ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹೆಸರಿದೆ.
ಈ ಪಟ್ಟಿಯನ್ನು ಪರಿಶೀಲಿಸಿ, ಅವರ ಹೆಸರು, ಹುದ್ದೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದ ಮಾಹಿತಿಯನ್ನು ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸುವಂತೆ ತಿಳಿಸಲಾಗಿದೆ.