
Dharmasthala: ಸರಣಿ ಶವಗಳ ಹೂತಿರುವ ಪ್ರಕರಣ; 9ನೇ ಪಾಯಿಂಟ್‌ನಲ್ಲಿ ಉತ್ಖನನ ಆರಂಭ
02/08/2025
ಧರ್ಮಸ್ಥಳದಲ್ಲಿ ಸರಣಿ ಶವಗಳ ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ಎಸ್‌ಐಟಿ ನಡೆಸುತ್ತಿರುವ ಶೋಧ ಕಾರ್ಯಐದನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 2ರಂದು ದೂರುದಾರ ತೋರಿಸಿರುವ 9 ನ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಜುಲೈ 1ರಂದು ದೂರುದಾರ ಗುರುತಿಸಿದ 7 ಮತ್ತು 8ನೇ ಜಾಗದಲ್ಲಿ ಅಗೆದು ಪರಿಶೀಲನೆ ನಡೆಸಿದರೂ ಯಾವುದೇ ಕುರುಹು ಲಭ್ಯವಾಗಿಲ್ಲ. ಈ ಎಡರಡೂ ಪಾಯಿಂಟ್‌ಗಳು ನದಿಯ ತಟದಲ್ಲಿದ್ದ ಕಾರಣ ಸುಲಭವಾಗಿ ಅಗೆಯಲಾಗಿತ್ತು. 9ನೇ ಪಾಯಿಂಟ್ ನದಿ ಬದಿಯ ಮೇಲ್ಭಾಗದ ಹೆದ್ದಾರಿ ಬದಿಯ ಅರಣ್ಯ ಪ್ರದೇಶದಲ್ಲಿದೆ. ಹೀಗಾಗಿ 9ನೇ ಪಾಯಿಂಟ್‌ನಲ್ಲಿ ಅಗೆಯುವ ಕಾರ್ಯ ಮುಂದುವರಿದಿದೆ.
ಗೌಪ್ಯತೆ ಕಾಪಾಡುವ ಉದ್ದೇಶದಿಂದ ಎಸ್‌ಐಟಿ ತಂಡ ಯಾವುದೇ ಮಾಹಿತಿಯನ್ನು ಬಿಟ್ಟು ಕೊಡುತ್ತಿಲ್ಲ. ಅಲ್ಲದೇ ಅಗೆಯುವ ಪ್ರಕ್ರಿಯೆ ಹೊರಗಡೆ ಕಾಣಿಸದಂತೆ ದೂರುದಾರ ಗುರುತಿಸಿದ 9, 10 ಮತ್ತು 11ನೇ ಜಾಗಗಳನ್ನು ಹಸಿರು ಪರದೆಯಿಂದ ಕಟ್ಟಿ ಮುಚ್ಚಲಾಗಿದೆ. ಇನ್ನು ಎಸ್‌ಐಟಿ ತಂಡ ಶೋಧ ಕಾರ್ಯಕ್ಕೆ ಬರುತ್ತಿದಂತೆ ಕುತೂಹಲಿಗರಾದ ಜನರು ಸೇರಿರುವ ದೃಶ್ಯ ಕೂಡಾ ಈಗ ಕಂಡು ಬಂತು.