Abu Dhabi: ಬೌಲಿಂಗ್‌ನಲ್ಲಿ ಎಡವಿದ ಸ್ಟಾರ್ ಕ್ರಿಕೆಟಿಗ ದುನಿತ್; ಮ್ಯಾಚ್ ನೋಡ್ತಿದ್ದ ತಂದೆ ಹೃದಯಾಘಾತಕ್ಕೆ ಬಲಿ
Friday, September 19, 2025
ಏಷ್ಯಾಕಪ್‌ನಲ್ಲಿ ಅಪ್ಘಾನಿಸ್ತಾನದ ವಿರುದ್ಧ ಆಡುತ್ತಿದ್ದ ಶ್ರೀಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಅವರಿಗೆ ದುರದೃಷ್ಟಕರ ದಿನವಾಗಿ ಪರಿಣಮಿಸಿದೆ. ದುನಿತ್ ವೆಲ್ಲಾಲಗೆ ಅವರ ಆಟವನ್ನು ನೋಡುತ್ತಿದ್ದ ತಂದೆ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.
ಅಪಘಾನಿಸ್ತಾನದ ವಿರುದ್ಧದ ಕೊನೆ ಲೀಗ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ 22 ವರ್ಷದ ದುನಿತ್ ವಿರುದ್ಧ ಮೊಹಮ್ಮದ್ ನಬಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಇದರಿಂದ ನಿರಾಸೆಗೊಂಡಿದ್ದ ದುನಿತ್‌ಗೆ ಪಂದ್ಯ ಮುಗಿಯುವ ವೇಳೆ ಮತ್ತೊಂದು ಆಘಾತ ಕಾದಿತ್ತು. ಮನೆಯಲ್ಲಿ ಮಗನ ಪಂದ್ಯ ವೀಕ್ಷಿಸುತ್ತಿದ್ದ ದುನಿತ್ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಡುನಿತ್ ಅವರ ತಂದೆ ಸುರಂಗ ವೆಲ್ಲಾಲಗೆ ಅವರಿಗೆ ಹೃದಯಾಘಾತವಾಯಿತು. ಪಂದ್ಯ ಮುಗಿದ ಬಳಿಕ ದುನಿತ್‌ಗೆ ವಿಷಯ ತಿಳಿಸಲಾಯಿತು. ಶ್ರೀಲಂಕಾದ ಸ್ಟಾರ್ ಆಟಗಾರ ದುನಿತ್ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ಈ ಪಂದ್ಯದಲ್ಲಿ ದ್ವೀಪವಾಸಿಗಳು ಜಯಗಳಿಸಿದರೂ, ಪಂದ್ಯ ಮುಗಿದ ನಂತರ ದುನಿತ್ ಅವರಿಗೆ ಅತ್ಯಂತ ದುರಂತ ಸುದ್ದಿ ತಿಳಿಯಿತು. ಶ್ರೀಲಂಕಾದ ಕೋಚ್ ಸನತ್ ಜಯಸೂರ್ಯ ಮೈದಾನದಲ್ಲಿ ವೆಲ್ಲಾಲಗೆ ಅವರಿಗೆ ಈ ದುರಂತ ಸುದ್ದಿಯನ್ನು ತಿಳಿಸುತ್ತಿರುವುದನ್ನು ನೋಡಬಹುದಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
