-->
ಅತ್ಯಾಚಾರ, ವಂಚನೆ ಪ್ರಕರಣ; ಇನ್ಸ್ಪೆಕ್ಟರ್ ಸುನಿಲ್ ಸಸ್ಪೆಂಡ್

ಅತ್ಯಾಚಾರ, ವಂಚನೆ ಪ್ರಕರಣ; ಇನ್ಸ್ಪೆಕ್ಟರ್ ಸುನಿಲ್ ಸಸ್ಪೆಂಡ್


ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್‌ನನ್ನು ಅಮಾನತು ಮಾಡಲಾಗಿದೆ. 

36 ವರ್ಷದ ಮಹಿಳೆ ನೀಡಿದ ದೂರಿನಂತೆ ಸುನಿಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯು ಡಿಜಿ ಮತ್ತು ಐಜಿಪಿ ಕಚೇರಿಗೂ ದೂರು ನೀಡಿದ್ದರು.

ಹಣದ ಮೋಸದ ವಿಚಾರಕ್ಕೆ ಠಾಣೆಗೆ ಬಂದಿದ್ದ 36 ವರ್ಷದ ಮಹಿಳೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸುನೀಲ್ ರಿಜಿಸ್ಟರ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ನಂತರ 1 ವರ್ಷದಲ್ಲಿ 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಅದರಂತೆ ಇದೀಗ ಇನ್ಸ್ಪೆಕ್ಟರ್ ಸುನಿಲ್ ನನ್ನು ಅಮಾನತು ಮಾಡಲಾಗಿದೆ. 










Ads on article

Advertise in articles 1

advertising articles 2

Advertise under the article