ವಿದ್ಯಾರ್ಥಿ ಬಂಧುತ್ವ ವೇದಿಕೆಯಿಂದ ಸೌಹಾರ್ದ ದೀಪಾವಳಿ
Monday, October 27, 2025
ವಿದ್ಯಾರ್ಥಿ ಬಂಧುತ್ವ ವೇದಿಕೆಯ ಆಶ್ರಯದಲ್ಲಿ ಸೌಹಾರ್ದ ದೀಪಾವಳಿ ಕಾರ್ಯಕ್ರಮವು ಕಾರ್ಕಳದ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಪತ್ರಕರ್ತ ಮತ್ತು ಚಿಂತಕ ಬಿಪಿನ್ ಚಂದ್ರಪಾಲ್ ಮಾತನಾಡಿ, ಅಂಧಾಕಾರದಿ0ದ ಬೆಳಕಿನೆಡಗೆ ಸಾಗುವ ರೂಪಕವಾದ ದೀಪಾವಳಿ ಹಬ್ಬವು ತಲೆತಲಾಂತರಗಳಿ0ದ ಆಚರಿಸಿಕೊಂಡು ಬರುತ್ತಿದ್ದು, ದೀಪಾವಳಿ ಹಬ್ಬದಲ್ಲಿ ಸಾಮಾಜಿಕ ನ್ಯಾಯದ ಸಂದೇಶವಿದೆ. ಸೌಹಾರ್ದತೆಯ ಸುಗಂಧವಿದೆ, ಶಾಂತಿ ಸಾಮರಸ್ಯದ ದ್ಯೋತಕವೇ ದೀಪಾವಳಿ ಎಂದು ಬಣ್ಣಿಸಿದರು.
ಕಾರ್ಕಳ ಕಾಂಗ್ರಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಾರ್ಜ್ ಕ್ಯಾಸ್ಟಲಿನೊ, ಮಾಜಿ ಪುರಸಭಾ ಸದಸ್ಯ ಅಶ್ಪಾಕ್ ಅಹಮದ್, ಕಾರ್ಕಳದ ಹಿರಿಯ ವಕೀಲ ಶೇಖರ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಮುಖರಾದ ಸುಧಾಕರ ಕೋಟ್ಯಾನ್ ಉಪಸ್ಥಿತರಿದ್ದರು.
ಮಾನವ ಬಂಧುತ್ವ ವೇದಿಕೆ ಕಾರ್ಕಳ ಘಟಕದ ಸಂಚಾಲಕರಾದ ಸುಭಿತ್.ಎನ್.ಆರ್ ಸ್ವಾಗತಿಸಿದರು. ಪುರಸಭಾ ಸದಸ್ಯೆ ನಳಿನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
.jpeg)

.jpeg)
