-->
ಮಲ್ಪೆ ಭಾದ್ರಗಡ ದ್ವೀಪಕ್ಕೆ ಅಕ್ರಮ ಪ್ರವೇಶ; 8 ಮಂದಿ ಮೀನುಗಾರರ ವಿರುದ್ಧ ದೂರು

ಮಲ್ಪೆ ಭಾದ್ರಗಡ ದ್ವೀಪಕ್ಕೆ ಅಕ್ರಮ ಪ್ರವೇಶ; 8 ಮಂದಿ ಮೀನುಗಾರರ ವಿರುದ್ಧ ದೂರು


ಮಲ್ಪೆ ಬಂದರು ವ್ಯಾಪ್ತಿಯಲ್ಲಿರುವ ನಿಷೇಧಿತ ಭಾದ್ರಗಡ ದ್ವೀಪಕ್ಕೆ ಅಕ್ರಮ ಪ್ರವೇಶಿಸಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿರುವ 8 ಮಂದಿ ಮೀನುಗಾರರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಲ್ಪೆ ಬಂದರು ಉಪ ಸಂರಕ್ಷಣಾಧಿಕಾರಿ ಅಂತೋನಿ ಫೆಲಿಕ್ಸ್ ಪರಂಬಿಲ್ ಎಂಬವರು ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ. ಮಲ್ಪೆ ವಡಬಾಂಡೇಶ್ವರ ನಿವಾಸಿ ಶೇಖರ್ ಕುಂದರ್ ಎಂಬವರ ಮಾಲಕತ್ವದ ಮೀನುಗಾರಿಕಾ ದೋಣಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿಗಳಾದ ಮೊಹಮ್ಮದ್ ಹುಸೈನ್ ಮಲ್ಬಾರಿ, ರೋಶನ್ ಜಮೀರ್, ಮೊಹಮ್ಮದ್ ಅನ್ಸಾರ್ ಬಶೀರಾ, ಅಬು ಸನಾನ್, ಅಣ್ಣಪ್ಪ ಮಂಜುನಾಥ ದೇವಾಡಿಗ, ಮೊಹಮ್ಮದ್ ಫೈಜಾನ್ ಶೇಖ್ ಹಾಗೂ ಮಹಮ್ಮದ್ ಜಾವೇದ್ ಅಹ್ಮದ್ ಎಂಬವರು ಸೇರಿಕೊಂಡು ಮಲ್ಪೆ ಭಾದ್ರಗಢ ದ್ವೀಪಕ್ಕೆ ತೆರಳಿದ್ದರು. ಸಂಜೆ 4 ಗಂಟೆಗೆ ಪ್ರವೇಶಿಸಿದ 8 ಮಂದಿ 5.30ರ ನಂತರ ವಾಪಾಸ್ಸಾಗಿದ್ದರು. 

ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿ ಅತಿಕ್ರಮ ಪ್ರವೇಶ ಮಾಡಿ ಅಪರಾಧ ಎಸಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 124/2025 ಕಲಂ: 329(3) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ. 

Ads on article

Advertise in articles 1

advertising articles 2

Advertise under the article