ಕಟೀಲು 7 ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಶಾಸ್ತ್ರೋಕ್ತ ಚಾಲನೆ
Monday, November 17, 2025
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಏಳು ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಚಾಲನೆ ಸಿಕ್ಕಿದೆ. ದುರ್ಗಾ ಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಲಾಯಿತು.
ಕಟೀಲು ದುರ್ಗಾ ಪರಮೇಶ್ವರ ದೇವಿಯ ಸನ್ನಿದಿಯಲ್ಲಿ ಏಳು ಮೇಳದ ಪ್ರಧಾನ ಬಾಗವತರು ಸ್ತುತಿ ಪದ್ಯವನ್ನು ದೇವಿಯ ಸನ್ನಿಧಿಯಲ್ಲಿ ಆರಂಭಿಸಿ, ನಂತರ ಏಳು ಮೇಳದ ಕಲಾವಿದರಿಗೆ ದೇವಿ ಸನ್ನಿದಿಯಲ್ಲಿ ಗೆಜ್ಜೆ ನೀಡಲಾಯಿತು. ನಂತರ ಕಲಾವಿದರು ದೇವಿಯ ಸಾನ್ನಿಧ್ಯದಲ್ಲಿ ಗೆಜ್ಜೆ ಕಟ್ಟಿ ಕುಣಿದು ಸೇವೆಗೆ ಚಾಲನೆ ಕೊಟ್ಟರು. ಬಳಿಕ ಚೌಕಿ ಪೂಜೆ ನಡೆದು ಯಕ್ಷಗಾನದ ಪೂರ್ವ ರಂಗವು ಏಳು ರಂಗಸ್ಥಳದಲ್ಲಿ ನಡೆಯಿತು.
ಕಟೀಲು ದೇವಿಗೆ ಅನೇಕ ಸೇವೆಗಳು ಭಕ್ತರು ಅರ್ಪಿಸಿಸುತ್ತಿದ್ದು ಅದರಲ್ಲಿ ಅತ್ಯಂತ ಪ್ರೀಯವಾದ ಸೇವೆ ಯಕ್ಷಗಾನ, ಏಳು ಮೇಳಗಳು ಸುಮಾರು ಆರು ತಿಂಗಳ ಕಾಲ ಸಾವಿರಕ್ಕೂ ಅಧಿಕ ಸೇವೆಯನ್ನು ಪೂರೈಸುತ್ತದೆ ಅಂದರೆ ದಿನಕ್ಕೆ ಕಟೀಲು ಮೇಳಗಳು ಏಳು ಕಡೆ ಪ್ರದರ್ಶನ ನೀಡುತ್ತದೆ. ವರ್ಷಂಪ್ರತೀ ಸುಮಾರು ಸಾವಿರಾರು ಹರಕೆ ಆಟಗಳು ಬುಕ್ ಆಗುತ್ತಿದೆ.



