-->
ಲಾಡ್ಜ್ ನ 3ನೇ ಮಹಡಿಯಿಂದ ಬಿದ್ದು ಯುವಕ ಸಾವು

ಲಾಡ್ಜ್ ನ 3ನೇ ಮಹಡಿಯಿಂದ ಬಿದ್ದು ಯುವಕ ಸಾವು


ಮೂರು ಅಂತಸ್ತಿನ ಕಟ್ಟಡದಿಂದ ಆಯತಪ್ಪಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ಗ್ರಾಮದ ನಿಡ್ಲೆ ಎಂಬಲ್ಲಿ ನಡೆದಿದೆ.

ನಿಡ್ಲೆ ಮಾಪಲಾಜೆ ಮನೆ ನಿವಾಸಿ ಸುಂದರ ಶೆಟ್ಟಿ ಎಂಬವರ ಪುತ್ರ ಮನೀಶ್(21) ಮೃತ ಯುವಕ. ಈತ ನಿಡ್ಲೆಯ ಆನಂದ ಲಾಡ್ಜ್ ನಲ್ಲಿ ರೂಮ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಲಾಡ್ಜ್ ನ 3 ನೇ ಮಹಡಿಯಿಂದ ಆಯತಪ್ಪಿ ಬಿದ್ದ ಮನೀಷನನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. 

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯುಡಿ ಆರ್: 56/2025  ಕಲಂ: 194 ಬಿ.ಎನ್.ಎಸ್.ಎಸ್. 2023 ಯಂತೆ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article