ಹುಲಿಕಲ್ ಘಾಟ್ ಬಳಿ ಬಸ್ ಅಪಘಾತ; ಮಗು ಸಾವು, 10 ಮಂದಿಗೆ ಗಾಯ
Tuesday, December 30, 2025
ದಾವಣಗೆರೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಧರೆಗೆ ಡಿಕ್ಕಿಯಾಗಿ ಮಗುವೊಂದು ಮೃತಪಟ್ಟು, ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಬಳಿ ನಡೆದಿದೆ.
ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಯ ಬಸ್ ಹುಲಿಕಲ್ ಘಾಟಿಯಲ್ಲಿ ಧರೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿದೆ. ಶರೀಫಾ ಬಿ (57) , ಇಮಾಮ್ ಸಾಬ್ (73), ಸಫಾನ (28) ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳÀನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಬಸ್ಸಿನ ಮುಂಭಾಗ ಜಖಂ ಆಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.