ಕಟಪಾಡಿ ಗ್ರಾ. ಪಂ ಸದಸ್ಯ ಪ್ರಭಾಕರ ಆಚಾರ್ಯ ಅವರ ತಂದೆ ಮೊಕ್ತೇಸರ್ ಕೃಷ್ಣಯ್ಯ ಆಚಾರ್ಯ ನಿಧನ
Sunday, December 07, 2025
ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಭಾಕರ ಆಚಾರ್ಯ ಅವರ ತಂದೆ ಮೊಕ್ತೇಸರ್ ಕೃಷ್ಣಯ್ಯ ಆಚಾರ್ಯ ಅವರು ಡಿ.6 ರಂದು ನಿಧನರಾಗಿದ್ದಾರೆ.
ಇವರು ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಕೊಡುವಳಿಕೆ ಗ್ರಾಮ ಮೊಕ್ತೇಸರರಾಗಿ 1984 ರಿಂದ ಪ್ರಸ್ತುತ 2025ರ ವರೆಗೂ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದಾರೆ.
ಕೃಷ್ಣಯ್ಯ ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಗುಡ್ಡೆಯ ಅವರ ಸ್ವಗ್ರಾಮದಲ್ಲಿ ಡಿ.7ರಂದು ಆದಿತ್ಯವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ .