-->
10 ಮಂದಿ ಅಕ್ರಮ ವಲಸಿಗರಿಗೆ 2 ವರ್ಷ ಸಜೆ, 1 ಲಕ್ಷ ರೂ.ದಂಡ

10 ಮಂದಿ ಅಕ್ರಮ ವಲಸಿಗರಿಗೆ 2 ವರ್ಷ ಸಜೆ, 1 ಲಕ್ಷ ರೂ.ದಂಡ


ಕಳೆದ ವರ್ಷ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಬಂಧಿತರಾಗಿದ್ದ 10 ಮಂದಿ ಬಾಂಗ್ಲಾ ವಲಸಿಗರಿಗೆ ನ್ಯಾಯಾಲಯವು 2 ವರ್ಷ ಸಜೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. 

ಹಕೀಮ್‌ ಆಲಿ, ಸುಜೋನ್‌ ಎಸ್‌.ಕೆ @ ಫಾರೂಕ್‌, ಇಸ್ಮಾಯಿಲ್‌ ಎಸ್‌.ಕೆ @ ಮಹಮದ್‌ ಇಸ್ಮಾಯಿಲ್‌ ಹಾಕ್‌, ಕರೀಮ್‌ ಎಸ್‌.ಕೆ @ ಅಬ್ದುಲ್‌ ಕರೀಮ್‌, ಸಲಾಂ ಎಸ್‌.ಕೆ @ ಎಮ್‌ಡಿ ಅಬ್ದುಲ್‌ ಅಜೀಜ್‌, ರಾಜಿಕುಲ್‌ ಎಸ್‌.ಕೆ, ಮೊಹಮ್ಮದ್‌ ಸೋಜಿಬ್‌ @ ಎಮ್‌ ಡಿ ಅಲ್ಲಾಂ ಆಲಿ, ರಿಮೂಲ್‌ @ ಅಬ್ದುಲ್‌ ರೆಹಮಾನ್‌, ಮೊಹಮ್ಮದ್‌ ಇಮಾಮ್‌ ಶೇಖ್‌, ಮೊಹಮ್ಮದ್‌ ಜಹಾಂಗಿರ್‌ ಆಲಂ ಶಿಕ್ಷೆಗೆ ಒಳಗಾದವರು. 

2024ರ ಅಕ್ಟೋಬರ್ 11ರಂದು ಮಲ್ಪೆ ಪಿಎಸ್ಐ ಪ್ರವೀಣ್‌ ಕುಮಾರ್‌ ಆರ್  ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಮಲ್ಪೆ ವಡಭಾಂಡೇಶ್ವರ ಬಸ್‌ ನಿಲ್ದಾಣದ ಬಳಿ 7 ಜನರು ಅನುಮಾನಸ್ಪದವಾಗಿ ಲಗೇಜ್‌ ಸಮೇತ ಓಡಾಡುತ್ತಿರುವುದನ್ನು ಕಂಡು ಅನುಮಾನಗೊಂಡು ವಿಚಾರಿಸಿದ್ದಾರೆ. ಈ ವೇಳೆ ಆರೋಪಿಗಳು ಅಕ್ರಮವಾಗಿ ನಕಲಿ ಆಧಾರ್‌ ಕಾರ್ಡ್‌ ದಾಖಲೆಗಳನ್ನು ಸೃಷ್ಟಿಸಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದಾಗಿ ತಿಳಿದುಬಂದಿದೆ. ಅವರನ್ನು  ವಶಕ್ಕೆ ಪಡೆದು ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಅವರ ವಿರುದ್ದ  ಅಪರಾಧ ಕ್ರಮಾಂಕ : 138/2025 ಕಲಂ 336(2). 336(3), 340(2), 319(2), 318(4) ಜೊತೆಗೆ 3(5) BNS  ಮತ್ತು 14(A) foreigners act, ಕಲಂ:34 ,42 ಆಧಾರ್‌ ಆಕ್ಟ್ ನಂತೆ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. 

ಪ್ರಕರಣದಲ್ಲಿ ವಿಚಾರಣೆ ನಡೆಸಿದ  ನ್ಯಾಯಾಲಯವು 10 ಮಂದಿ ಆರೋಪಿತರಿಗೆ  2 ವರ್ಷಗಳ ಕಾಲ ಸಜೆಯನ್ನು ಮತ್ತು ತಲಾ 10,000 ರೂಪಾಯಿ ದಂಡವನ್ನು  ವಿಧಿಸಿ ಆದೇಶಿಸಿದೆ.

Ads on article

Advertise in articles 1

advertising articles 2

Advertise under the article