ಕಾರವಾರ ಜೈಲಿನಲ್ಲಿ ಮತ್ತೆ ಖೈದಿಗಳ ದಾಂಧಲೆ; ಸಿಸಿಟಿವಿ ಪುಡಿಗಟ್ಟಿದ ಖೈದಿಗಳು
Wednesday, December 10, 2025
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಖೈದಿಗಳು ಮತ್ತೆ ದಾಂಧಲೆ ನಡೆದಿದ್ದಾರೆ. ಸಿಸಿಟಿವಿ ಸೇರಿದಂತೆ ಕಾರಾಗೃಹದ ವಸ್ತುಗಳನ್ನು ಖೈದಿಗಳು ಪುಡಿಗೈದಿದ್ದಾರೆ.
ಮಂಗಳೂರಿನ ಆರು ಆರೋಪಿಗಳಿಂದ ಜೈಲಿನಲ್ಲಿ ಗಲಾಟೆಯಾಗಿದ್ದು, ವಸ್ತುಗಳನ್ನೆಲ್ಲ ಪುಡಿಗಟ್ಟಿದ್ದಾರೆ. ಕಾರವಾರ ನಗರ ಠಾಣೆ ಪೊಲೀಸರ ತಂಡ ಜೈಲಿಗೆ ದೌಡಾಯಿಸಿ ಪರಿಶೀಲನೆ ನಡೆಸಿದೆ.
ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರು ಆರೋಪಿಗಳನ್ನು ಕಾರವಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ಆರು ಮಂದಿ ಆರೋಪಿಗಳು ಜೈಲಿನಲ್ಲಿ ಜೈಲು ಸಿಬ್ಬಂದಿಗಳ ಮೇಲೆ ಮೊನ್ನೆ ಹಲ್ಲೆ ನಡೆಸಿದ್ದರು. ಇದೀಗ ಮತ್ತೆ ಇಂದು ಉಳಿದ ಸಹಚರರಿಂದ ಜೈಲಿನಲ್ಲಿ ದಾಂಧಲೆ ನಡೆದಿದೆ. ಕಾರವಾರ ಡಿವೈಎಸ್‌ಪಿ ಗಿರೀಶ್ ಜೈಲಿನಲ್ಲಿ ಮೊಕ್ಕಾಂ ಹೂಡಿದ್ದಾರೆ.