ಸ್ಟೆಫಿ ಗ್ರಾಫ್-ಅ್ಯಂಡ್ರೆ ಆಗಸ್ಸೆ: ಏಕಾಏಕಿ ಮಾಯವಾದ ಟೆನ್ನಿಸ್ ಲೋಕದ ಬಂಗಾರದ ಜೋಡಿ ಈಗೆಲ್ಲಿ?
Wednesday, December 31, 2025
ಒಂದು ಕಾಲದಲ್ಲಿ ಈ ಜೋಡಿ ಬಂಗಾರದ ಜೋಡಿ ಎಂದೇ ಖ್ಯಾತಿ ಪಡೆದಿತ್ತು. ಟೆನ್ನಿಸ್ ಲೋಕದ ದಂತಕಥೆಯಾಗಿದ್ದ ಸ್ಟೆಫಿಗ್ರಾಫ್ ಮತ್ತು ಆಂಡ್ರೆ ಅಗಸ್ಸಿ ಅವರ ಲವ್ ಸ್ಟೋರಿ ಆರಂಭವಾದದ್ದೇ ವಿಶ್ವದ ಖ್ಯಾತಿವೆತ್ತ ಟೆನ್ನಿಸ್ ಕೋರ್ಟ್ಗಳಲ್ಲಿ.
22 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಸ್ಟೆಫೀಗ್ರಾಪ್ ಜಗತ್ ಸುಂದರಿ. ತನ್ನ ಸೌಂದರ್ಯ ಹಾಗೂ ಕ್ರೀಡಾ ಚತುರತೆಯಿಂದಲೇ ಜನಾಕರ್ಷಿಸಿದವರು. 1990ರ ಕಾಲದಲ್ಲಿ ಪಡ್ಡೆ ಹುಡುಗರಿಗಂತೂ ಈಕೆ ಸ್ವಪ್ನ ಸುಂದರಿ. ಹೀಗಾಗಿ ಅಂದಿನ ಪಡ್ಡೆ ಹುಡುಗರ ಡೈರಿಯಲ್ಲೋ.. ನೋಟ್ ಬುಕ್ಕಿ ಸಂದಿನಲ್ಲಿ ಸ್ಟೆಫಿಯ ಪೇಪರ್ ಕಟ್ಟಿಂಗ್ಸ್ ಇಟ್ಟುಕೊಳ್ಳುವಷ್ಟು ಹುಚ್ಚುಹಿಡಿಸಿದ್ದಾಕೆ. ಕೆಲವರಂತೂ ಸ್ಟೆಫಿ ಭಾವಚಿತ್ರವಿರುವ ಪೇಪರ್ ಕಟ್ಟಿಂಗ್ಸ್ ಅನ್ನು ಎದೆಗವುಚಿ ಮಲಗುತ್ತಿದ್ದರಂತೆ. ತಮ್ಮ ಮೋಹಕ ಆಟದಿಂದಲೇ ಜಗತ್ತನ್ನು ಸೂಚಿಗಲ್ಲಿನಂತೆ ಆಕರ್ಷಿಸಿದ ಆಂಡ್ರೆ ಅಗಾಸ್ಸಿ ಮತ್ತು ಪಡ್ಡೆ ಹೈಕ್ಲ ನಿದ್ದೆ ಕದ್ದ ಸ್ಟೆಫಿ ಗ್ರಾಫ್ 2001ರಲ್ಲಿ ವಿವಾಹವಾದರು.
ಟೆನ್ನಿಸ್ಸನ್ನೇ ಗೆದ್ದ ಈ ಜೋಡಿ ಏಕಾಏಕಿ ಟೆನ್ನಿಸ್ ಲೋಕದಿಂದಲೇ ಮಾಯವಾಯಿತು. ಈ ಜೋಡಿ ಎಲ್ಲಿ ಹೋದರಪ್ಪ ಎನ್ನುತ್ತಾ ಟೆನ್ನಿಸ್ ಪ್ರೇಮಿಗಳು ನಿಬ್ಬೆರಗಾಗುವಂತೆ ಮಾಡಿತ್ತು. ಬರೋಬ್ಬರಿ 2 ದಶಕಗಳ ಬಳಿಕ ಅವರ ಸತ್ಯ ಬಯಲಾಗಿದೆ.
ಅಗಸ್ಸಿ ಹಾಗೂ ಗ್ರಾಫ್ ಟೆನ್ನಿಸ್ ಖ್ಯಾತಿಯನ್ನು ಬದಿಗಿಟ್ಟು ಮನಶ್ಶಾಂತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಅವರು ವೇಗಸ್ ನಗರದ ಗೇಟೆಡ್ ಅಪಾರ್ಟ್ಮೆಂಟ್‌ವೊಂದರಲ್ಲಿ ತಮ್ಮ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದ್ದರು. ಈಗ ಅವರನ್ನು ಪಾಪರಾಜಿಗಳ ಪೀಡೆ ಇಲ್ಲ. ಮನೆಯಲ್ಲಿ ಟೆನ್ನಿಸ್ ಟ್ರೋಫಿಗಳ ಪ್ರದರ್ಶನವೂ ಇಲ್ಲ. ಮನೆಯಲ್ಲಿರುವುದು ತಮ್ಮ ಮಕ್ಕಳ ಬೇಸ್ ಬಾಲ್ ಹಾಗೂ ನೃತ್ಯ ಸಾಧನೆಯ ಪ್ರಶಸ್ತಿ ಹಾಗೂ ಪುರಸ್ಕಾರಗಳು ಮಾತ್ರ.
ಪುತ್ರ ಜೇಡನ್ ಈಗ ವೃತ್ತಿಪರ ಬೇಸ್‌ಬಾಲ್ ಆಟಗಾರ. ಪುತ್ರಿ ಜಾಝ್ ಅವರು ಫಿಟ್ ನೆಸ್ ಟ್ರೈನರ್ ಹಾಗೂ ಡಾನ್ಸ್ ಚಾಂಪಿಯನ್. ವಿಂಬಲ್ಡನ್ ಕೀರ್ತಿಯಲ್ಲಿ ಮುಳುಗಿರುವ ಬದಲು ತಮ್ಮ ಆದಾಯದ ಕೋಟ್ಯಾಂತರ ರೂಪಾಯಿ ಹಣವನ್ನು ಶಿಕ್ಷಣ ಹಾಗೂ ಪಿಕಲ್ ಬಾಲ್ ಕ್ರೀಡೆಗೆ ದಾನವಾಗಿ ನೀಡುತ್ತಿದ್ದಾರೆ.
ಒಂದು ಕಾಲದಲ್ಲಿ ಕೀರ್ತಿಯ ಉತ್ತುಂಗಕ್ಕೇರಿದ್ದ ಈ ಜೋಡಿ ಈಗ ನೆಮ್ಮದಿಯಿಂದ ತಮ್ಮದೇ ಆದ ಸ್ವಂತ ಜೀವನ ನಡೆಸುತ್ತಿದ್ದಾರೆ.


