-->
ಉಡುಪಿ ಶ್ರೀಕೃಷ್ಣ ಮಠದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಕಡ್ಡಾಯ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಕಡ್ಡಾಯ


ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ಪುರುಷ ಭಕ್ತಾದಿಗಳು ಇನ್ನು ಮುಂದೆ ಅಂಗಿ ತೆಗೆದು ಪ್ರವೇಶಿಸಬೇಕಾಗಿದೆ. ಇಂದಿನಿಂದ ಈ ನಿಯಮವನ್ನು ಪರ್ಯಾಯ ಶೀರೂರು ಮಠ ಕಡ್ಡಾಯಗೊಳಿಸಿದೆ. 

ಕೃಷ್ಣಮಠಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಚಾಲ್ತಿಯಲ್ಲಿರಲಿದ್ದು, ಮಹಿಳೆಯರು ಸಭ್ಯ ಉಡುಪುಗಳನ್ನು ಧರಿಸಬೇಕು. ಜೀನ್ಸ್ ಪ್ಯಾಂಟ್, ಟಿ ಶರ್ಟ್ ಸ್ಲೀವ್ ಲೆಸ್ ಉಡುಪುಗಳನ್ನು ಧರಿಸಿ ಬರುವ ಮಹಿಳೆಯರು ಹಾಗು ಪುರುಷರಿಗೆ ಪ್ರವೇಶವಿಲ್ಲ. ಹಾಗೆಯೇ ಪುರುಷ ಭಕ್ತರು ದೇವಳದ ಒಳಗಡೆ ಪ್ರವೇಶಿಸುವ ಮೊದಲು ಅಂಗಿ ತೆಗೆಯಬೇಕು ಎಂಬ ನಿಯಮ ಮಾಡಲಾಗಿದೆ. 

ಈ ಹಿಂದೆ ಕೃಷ್ಣ ಮಠಕ್ಕೆ ಬೆಳಗ್ಗೆ 11 ಗಂಟೆ ಒಳಗಡೆ ಬೆಳಗ್ಗಿನ ಮಹಾಪೂಜೆ ಗೆ ಆಗಮಿಸುವ ಭಕ್ತರು ಅಂಗಿ ಧರಿಸಬಾರದು ಎಂಬ ನಿಯಮವಿತ್ತು. ಆದರೆ ಇನ್ನು ಮುಂದೆ ಯಾವುದೇ ಸಮಯದಲ್ಲೂ ದೇವಳಕ್ಕೆ ಆಗಮಿಸುವ ಸಂದರ್ಭದಲ್ಲಿ ಈ ನಿಯಮ ಜಾರಿಯಲ್ಲಿರಲಿದೆ.

Ads on article

Advertise in articles 1

advertising articles 2

Advertise under the article