ಮಹಿಳೆಯ ಕರಿಮಣಿ ಸರ ಎಗರಿಸಿದ ಕಳ್ಳನ ಬಂಧನ
Monday, December 29, 2025
ಮಂಗಳೂರಿನ ಕೊಂಚಾಡಿ ಕೊಪ್ಪಲಕಾಡುವಿನಲ್ಲಿ ಮಹಿಳೆಯೊಬ್ಬರ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಕಳ್ಳನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಮೂಲದ ರೋಹಿತ್(25) ಬಂಧಿತ ಆರೋಪಿ. ಡಿ. 25ರಂದು ಸಂಜೆ ಕೊಂಚಾಡಿ ಗುರುನಗರದ ರತ್ನಾವತಿ ಅವರ ಕತ್ತಿನಿಂದ ಸುಮಾರು 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಕಳ್ಳ ಪರಾರಿಯಾಗಿದ್ದ. ಸಿಸಿಕ್ಯಾಮರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿOದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.