ಮುಲ್ಕಿ ಪದ್ಮಶಾಲಿ ಯುವ ವೇದಿಕೆ ವತಿಯಿಂದ ಕ್ರೀಡಾಕೂಟ
ಮುಲ್ಕಿ ಪದ್ಮಶಾಲಿ ಯುವ ವೇದಿಕೆಯು ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನ ಮಾನಂಪಾಡಿ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟವನ್ನು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ಕ್ರೀಡಾ ಮೈದಾನದಲ್ಲಿ ಆಯೋಜಿಸಿತು.
ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪರು ಧ್ವಜಾರೋಹಣಗೈದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಅವರು ದೀಪ ಬೆಳಗಿಸಿ ಕ್ರೀಡಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಡಿ. ಶೆಟ್ಟಿಗಾರ್ ವಹಿಸಿದ್ದರು.
ಶಾರದಾ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲ ಜಿತೇಂದ್ರ ವಿ ರಾವ್, ಮುಲ್ಕಿ ದೇವಸ್ಥಾನದ ಮೊಕ್ತೇಸರ ಭಾಸ್ಕರ್ ಆರ್ ಶೆಟ್ಟಿಗಾರ್, ರಾಜೇಶ್ ಶೆಟ್ಟಿಗಾರ್, ವಾಸುದೇವ ಶೆಟ್ಟಿಗಾರ್, ಸದಾಶಿವ ಗೋಳಿಜೋರ, ದ.ಕ. ಪದ್ಮಶಾಲಿ, ಕ್ರೀಡಾ ಸಂಚಾಲಕರು, ನಾಲ್ಕು ಮಾಗಣೆಯ ಗುರಿಕಾರರು, ದೇವಸ್ಥಾನದ ಅರ್ಚಕವೃಂದ, ಯುವ ವೇದಿಕೆಯ ಪದಾಧಿಕಾರಿಗಳು ಹಾಗೂ ಮುಲ್ಕಿ ದೇವಸ್ಥಾನದ ನಾಲ್ಕು ಮಾಗಣೆಯ ಸದಸ್ಯರು ಉಪಸ್ಥಿತರಿದ್ದರು.
ಯುವ ವೇದಿಕೆಯ ಅಧ್ಯಕ್ಷರಾದ ಹರೀಶ್ ಬಿ. ಪದ್ಮಶಾಲಿ ಸ್ವಾಗತಿಸಿದರು. ಕುಶಲ ಶೆಟ್ಟಿಗಾರ್ ಪ್ರಾರ್ಥಿಸಿ, ಹರೀಶ್ ಶೆಟ್ಟಿಗಾರ್ ಶಿಮಂತೂರು ಧನ್ಯವಾದ ಸಮರ್ಪಿಸಿದರು.
ಹರಿರಾಜ ಶೆಟ್ಟಿಗಾರ್ ಕುಜಿಂಗಿರಿ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ರೀಡಾಳುಗಳಿಗೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆ ಜರಗಿತು. ಪದ್ಮಶಾಲಿ ಸಮಾಜದ ಮಕ್ಕಳು ಮಹಿಳೆಯರು ಪುರುಷರು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.